ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕನಿಗೆ ಶೌರ್ಯ ಚಕ್ರ ಪುರಸ್ಕಾರ

ಉಗ್ರರ ವಿರುದ್ಧ ಹೋರಾಡುವ ವೀರಯೋಧರಿಗೆ ಶೌರ್ಯ ಚಕ್ರ, ಪರಮವೀರ ಚಕ್ರ ಪ್ರಶಸ್ತಿ ಲಭಿಸುವುದನ್ನು ಕೇಳಿದ್ದೀರಿ. ಆದರೆ ಈ ಬಾರಿ ವಿಶೇಷವೆಂಬಮ್ತೆ ಉಗ್ರರ ದಾಳಿಯನ್ನು ಎದುರಿಸಿ...
ಉಗ್ರರ ದಾಳಿ ವಿಫಲಗೊಳಿಸಿದ್ದ 16ರ  ಬಾಲಕನಿಗೆ ಶೌರ್ಯ ಚಕ್ರ ಪುರಸ್ಕಾರ
ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕನಿಗೆ ಶೌರ್ಯ ಚಕ್ರ ಪುರಸ್ಕಾರ
ನವದೆಹಲಿ: ಉಗ್ರರ ವಿರುದ್ಧ ಹೋರಾಡುವ  ವೀರಯೋಧರಿಗೆ ಶೌರ್ಯ ಚಕ್ರ, ಪರಮವೀರ ಚಕ್ರ ಪ್ರಶಸ್ತಿ ಲಭಿಸುವುದನ್ನು ಕೇಳಿದ್ದೀರಿ. ಆದರೆ ಈ ಬಾರಿ ವಿಶೇಷವೆಂಬಮ್ತೆ ಉಗ್ರರ ದಾಳಿಯನ್ನು ಎದುರಿಸಿದ 16ರ  ಬಾಲಕನೊಬ್ಬನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೌರ್ಯ ಚಕ್ರ ಪುರಸ್ಕಾರ ದೊರಕಿದೆ.
2017ರ ಅಕ್ಟೋಬರ್​ 16ರ ಮಧ್ಯರಾತ್ರಿ ಕಾಶ್ಮೀರದ ಶೋಪಿಯಾನ್​ ಜಿಲ್ಲೆಯ ನಿವಾಸಿ ಪಿಡಿಪಿ ಕಾರ್ಯಕರ್ತ, ನಾಯಕರಾಗಿದ್ದ  ಮಾಜಿ ಸರ್​ಪಂಚ್​ ಮೊಹಮ್ಮದ್​ ರಂಜಾನ್​  ಎನ್ನುವವರ ಮನೆಗೆ ನುಗ್ಗಿ ಅವರ ಹತ್ಯೆಗೆ ಉಗ್ರರು ಯತ್ನಿಸಿದ್ದರು. ಆ ವೇಳೆ ರಂಜಾನ್ಪುತ್ರ ದ ಇರ್ಫಾನ್​ ರಂಜಾನ್​ ಶೇಖ್​ ಉಗ್ರರನ್ನು ಎದುರಿಸಿ ಅವರನ್ನು ಬಾಗಿಲಿನಿಂದ ಒಳಪ್ರವೇಶಿಸದಂತೆ ತಡೆಇದ್ದಾನೆ.
ಶಸ್ತ್ರಸಜ್ಜಿತರಾಗಿದ್ದ ಉಗ್ರರು ಗುಂಡು ಹಾರಿಸಿದರೂ ಎದೆಗುಂದದೆ ತನ್ನ ತಂದೆಯ ಪ್ರಾಣ ರಕ್ಷಣೆಗೆ ನಿಂತಿದ್ದ ಆ ಬಾಲಕನಿಗೆ ರಾಷ್ಟ್ರಪತಿ ಕೋವಿಂದ್ ಶೌರ್ಯ ಚಕ್ರ ನೀಡಿ ಸನ್ಮಾನಿಸಿದ್ದಾರೆ.
ಘಟನೆಯ ವೇಳೆ ಮೊಹಮ್ಮದ್​ ರಂಜಾನ್​ ತೀವ್ರವಾಗಿಗಾಯಗೊಂಡಿದ್ದು ಬಳಿಕ ನಿಧನರಾಗಿದ್ದರು. ಅದೇ ವೇಳೆ ಓರ್ವ ಉಗ್ರನಿಗೆ ಸಹ ಗುಂಡೇಟಿನಿಂದ ಗಂಭೀರ ಗಾಯವಾಗಿತ್ತು. 
ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಇರ್ಫಾನ್ ಮುಂದೆ ಐಪಿಎಸ್ ಅಧಿಕಾರಿಯಾಗುವ ಇಚ್ಚೆ ವ್ಯಕ್ತಪಡಿಸಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com