" ಪಾಕಿಸ್ತಾನದ ಜನತೆಗೆ ರಾಷ್ಟ್ರೀಯ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ, ಉಪಖಂಡ ಜನತೆ ತಮ್ಮ ಪ್ರದೇಶದ ಶಾಂತಿ, ಅಭಿವೃದ್ಧಿ ಹಾಗೂ ಸಂವೃದ್ಧಿಗೆ ಭಯೋತ್ಪಾದನೆ ಹಾಗೂ ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಒಟ್ಟಿಗೆ ಕೆಲಸ ಮಾಡುವ ಸಮಯ ಇದು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆ ಸಮಾರಂಭಗಳನ್ನು ಬಹಿಷ್ಕರಿಸಲು ಹಾಗೂ ಪ್ರತಿನಿಧಿಗಳನ್ನು ಕಳಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಶುಭಾಶಯ ಸಂದೇಶ ರವಾನೆ ಮಾಡಿದ್ದಾರೆ.