ಪ್ರತ್ಯೇಕತಾವಾದಿ ಯಾಸಿನ್​ ಮಲಿಕ್​ ನ ಜೆಕೆಎಲ್​ಎಫ್​ ಸಂಘಟನೆಗೆ ಕೇಂದ್ರ ಸರ್ಕಾರ ನಿಷೇಧ!

ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್​ ಮಲಿಕ್​ ನೇತೃತ್ವದ ಜಮ್ಮು ಆ್ಯಂಡ್​ ಕಾಶ್ಮೀರ್​ ಲಿಬರೇಷನ್​ ಫ್ರಂಟ್​ (ಜೆಕೆಎಲ್​ಎಫ್​) ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಯಾಸಿನ್​ ಮಲಿಕ್
ಯಾಸಿನ್​ ಮಲಿಕ್
ನವದೆಹಲಿ: ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್​ ಮಲಿಕ್​ ನೇತೃತ್ವದ ಜಮ್ಮು ಆ್ಯಂಡ್​ ಕಾಶ್ಮೀರ್​ ಲಿಬರೇಷನ್​ ಫ್ರಂಟ್​ (ಜೆಕೆಎಲ್​ಎಫ್​) ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಭಯೋತ್ಪಾದನೆ ವಿರೋಧಿ ಕಾನೂನಿನಡಿಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಚಟುವಟಿಕೆಗಳ ಪ್ರಚಾರ ನಡೆಸುತ್ತಿದ್ದ ಜೆಕೆಎಲ್​ಎಫ್ ನಿಷೇಧವಾಗಿದೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ರಾಷ್ಟ್ರೀಯ ದಿನ ಆಚರಣೆಗಾಗಿ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಇಸ್ಲಾಮಾಬಾದ್ ಆಹ್ವಾನಿಸಿದ ಬೆನ್ನಲ್ಲೇ ಕೆಂದ್ರ ಸರ್ಕಾರ ಈ ಕ್ರಮ ಜರುಗಿಸಿದೆ. ಇದಾಗಲೇ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯನ್ನು ಭಾರತ ಅಧಿಕೃತವಾಗಿ ಬಹಿಷ್ಕರಿಸಿದೆ.
ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಇದಾಗಲೇ ಬಂಧನದಲ್ಲಿದ್ದಾನೆ. ಈತನನ್ನು ಜಮ್ಮುವಿನ ಕೋಟ್ ಬಲ್ವಾಲ್‌ ಜೈಲಿನಲ್ಲಿರಿಸಲಾಗಿದೆ.
ಒಂದೇ ತಿಂಗಳಿನಲ್ಲಿ ಜಮ್ಮು ಕಾಶ್ಮೀರದಲ್ಲಿ ನಿಷೇಧಕ್ಕೊಳಗಾದ ಎರಡನೇ ಸಂಘಟನೆ ಎನ್ನುವುದಾಗಿ ಜೆಕೆಎಲ್ಎಫ್ ಗುರುತಿಸಲ್ಪಟ್ಟಿದೆ
"ಕೇಂದ್ರ ಸರಕಾರ ಇಂದು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ (ಯಾಸಿನ್ ಮಲಿಕ್ ಬಣ) ಯನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ, 1967 ರ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದೆಭಯೋತ್ಪಾದನೆ ವಿರುದ್ಧ ಸರ್ಕಾರದ ಕಠಿಣ ನೀತಿಯ ಅನುಸಾರವಾಗಿ ಈ ಆದೇಶ ಬಂದಿದೆ

"ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಕಣಿವೆಯಲ್ಲಿ ಪ್ರತ್ಯೇಕತಾವಾದಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾ ಬಂದಿದೆ.1988 ರಿಂದ ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಹಿಂಸಾತ್ಮಕ ಘಟನೆಗೆ ಈ ಸಂಘಟನೆ ಬಲವಾದ ಬೆಂಬಲ ನೀಡಿದೆ" ಎಂದು ಕೆಂದ್ರದ ನಿರ್ಧಾರದ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com