ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 1800 ಕೋಟಿ ರೂಪಾಯಿಗಳನ್ನು ಹೈಕಮಾಂಡ್ ಗೆ ಪಾವತಿಸಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.ವಿಪಕ್ಷ ಕಾಂಗ್ರೆಸ್ ಉಲ್ಲೇಖಿಸಿರುವ ಡೈರಿ ಒಂದು "ಸ್ವಯಂ ಸೃಷ್ಟಿಯ ನಕಲಿ ದಾಖಲೆ" ಎಂದು ಅವರು ಹೇಳಿದರು.
ಬಾಲಕೋಟ್ ನಲ್ಲಿನ ವಾಯುದಾಳಿಯನ್ನು ಪ್ರಶ್ನಿಸಿರುವ ಸ್ಯಾಮ್ ಪಿತ್ರೋಡಾ (ಗಾಂಧಿ ಕುಟುಂಬದ ಆಪ್ತಮಿತ್ರ) ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಂದ ತಮಗಾಗಬಹುದಾದ ಮುಜುಗರವನ್ನು ಮರೆಮಾಚಲು ಶುಕ್ರವಾರ ಕಾಂಗ್ರೆಸ್ ಯಡಿಯೂರಪ್ಪನವರ "ಡೈರಿ"ಯನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ತಿಳಿಸಿದ್ದಾರೆ.
"ಕಾಂಗ್ರೆಸ್ ನ ವಕ್ತಾರ ರಣದೀಪ್ಸಿಂಗ್ ಸುರ್ಜೆವಾಲಾ ಶುಕ್ರವಾರ ಮಾಡಿದ ಆರೋಪಕ್ಕೆ ಆಧಾರ ಕಾರವಾನ್ ವರದಿಯಾಗಿದೆ. ಇದು ಕಾಂಗ್ರೆಸ್ ನಾಯಕರೇ ಸ್ವಯಂಸೃಷ್ಟಿಸಿರುವ ನಕಲಿ ದಾಖಲೆ ಎನ್ನುವುದಾಗಿ ಕಂಡುಬರುತ್ತಿದೆ."ಜೇಟ್ಲಿ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ದಿನಕ್ಕೊಂದು ಆಟ ಕಟ್ಟುತ್ತಿದೆ, ಕಾಂಗ್ರೆಸ್ ನಿಂದ ತಯಾರಿಸಲ್ಪಟ್ಟ " ನಕಲಿ ಮತ್ತು ಕೃತ್ರಿಮ ಪೋಟೋಕಾಪಿಯನ್ನೇ ಡಿಯೂರಪ್ಪ ಅವರ ದಿನಚರಿ ಎಂದು ಅದು ಹೇಳಿಕೊಳ್ಳುತ್ತಿದೆ.ಮತದಾರರು ರಾಜಕಾರಣಿಗಳಿಗಿಂತ ಬುದ್ಧಿವಂತರಿದ್ದಾರೆ. ಸುಳ್ಳು ಹೇಳಿಕೆಗಳ ನಂಬುವುದಿಲ್ಲ.ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ.