ಖಾತೆ ಹಂಚಿಕೆ ಮಾಡಿದ ಗೋವಾ ನೂತನ ಮುಖ್ಯಮಂತ್ರಿ: ಗೃಹ, ಹಣಕಾಸು ಉಳಿಸಿಕೊಂಡ ಪ್ರಮೋದ್ ಸಾವಂತ್

ಗೋವಾ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆ ಹಾಗೂ ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಖಾತೆ ಹಂಚಿಕೆ ಮಾಡಿದ ಗೋವಾ ನೂತನ ಮುಖ್ಯಮಂತ್ರಿ: ಗೃಹ, ಹಣಕಾಸು ಉಳಿಸಿಕೊಂಡ ಪ್ರಮೋದ್ ಸಾವಂತ್
ಖಾತೆ ಹಂಚಿಕೆ ಮಾಡಿದ ಗೋವಾ ನೂತನ ಮುಖ್ಯಮಂತ್ರಿ: ಗೃಹ, ಹಣಕಾಸು ಉಳಿಸಿಕೊಂಡ ಪ್ರಮೋದ್ ಸಾವಂತ್
ಪಣಜಿ: ಗೋವಾ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆ ಹಾಗೂ ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. 
ಈ ಹಿಂದಿನ ಮುಖ್ಯಮಂತ್ರಿ ದಿ.ಮನೋಹರ್ ಪರಿಕ್ಕರ್ ಅವರ ಬಳಿ ಇದ್ದ ಎಲ್ಲಾ ಖಾತೆಗಳನ್ನೂ ಪ್ರಮೋದ್ ಸಾವಂತ್ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. 
ಪ್ರಮೋದ್ ಸಾವಂತ್ ಸರ್ಕಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿದ್ದು ಮಾ.12 ರಂದು ಪ್ರಮೋದ್ ಸಾವಂತ್ ಅವರೊಂದಿಗೆ 11 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. 
ಉಪಮುಖ್ಯಮಂತ್ರಿ ಸುದಿನ್ ಧಾವಳೀಕರ್ ಗೆ ಸಾರಿಗೆ ಖಾತೆ, ಲೋಕೋಪಯೋಗಿ, ನದಿ ಸಂಚಾರ ಹಾಗೂ ಮ್ಯೂಸಿಯಂ ಇಲಾಖೆಗಳನ್ನು ನೀಡಲಾಗಿದೆ. ಮತ್ತೋರ್ವ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿಗೆ ಯೋಜನೆ, ಕೃಷಿ,  ದಾಖಲೆಗಳು ಮತ್ತು ಪುರಾತತ್ತ್ವ ಶಾಸ್ತ್ರ ಮತ್ತು ಕಾರ್ಖಾನೆಗಳು ಮತ್ತು ಬಾಯ್ಲರ್ ಖಾತೆಗಳನ್ನು ನೀಡಲಾಗಿದೆ. 
ಮೂವರು ಪಕ್ಷೇತರ ಶಾಸಕರಿಗೂ ಖಾತೆಗಳನ್ನು ನೀಡಲಾಗಿದ್ದು, ಮನೋಹರ್ ಅಜ್ಗಾಂಕರ್ (ಎಂಜಿಪಿ) ಗೆ ಪ್ರವಾಸೋದ್ಯಮ ಖಾತೆ ಕ್ರೀಡಾ ಮತ್ತು ಮುದ್ರಣ ಇಲಾಖೆ ಇಲಾಖೆ ನೀಡಲಾಗಿದೆ. ಶಾಸಕ ರೋಹನ್ ಖೌಂಟೆ ಕಂದಾಯ, ಮಾಹಿತಿ ತಂತ್ರಜ್ಞಾನಹಾಗೂ ಕಾರ್ಮಿಕ, ಉದ್ಯೋಗ ಖಾತೆಗಳನ್ನು ನೀಡಲಾಗಿದೆ. ಮತ್ತೋರ್ವ ಶಾಸಕ ಗೋವಿಂದ್ ಗವಾಡೆ ಕಲೆ ಮತ್ತು ಸಂಸ್ಕೃತಿ, ನಾಗರಿಕ ಪೂರೈಕೆ, ಬುಡಕಟ್ಟು ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com