cಮಗುವನ್ನು ರಕ್ಷಿಸಿದ ಎನ್ ಡಿ ಆರ್ ಎಫ್ ತಂಡ
ದೇಶ
60 ಅಡಿ ಬೋರ್ ವೆಲ್ ಗೆ ಬಿದ್ದಿದ್ದ 18 ತಿಂಗಳ ಮಗುವಿನ ರಕ್ಷಣೆ
ಹರಿಯಾಣದ ಹಿಸರ್‌ನಲ್ಲಿ ಬೋರ್‌ವೆಲ್‌ಗೆ ಬಿದ್ದ ಒಂದೂವರೆ ವರ್ಷದ ಮಗುವನ್ನು ರಕ್ಷಿಸಲಾಗಿದೆ. ..
ಹಿಸಾರ್: ಹರಿಯಾಣದ ಹಿಸರ್‌ನಲ್ಲಿ ಬೋರ್‌ವೆಲ್‌ಗೆ ಬಿದ್ದ ಒಂದೂವರೆ ವರ್ಷದ ಮಗುವನ್ನು ರಕ್ಷಿಸಲಾಗಿದೆ.
ಮನೆ ಬಳಿ ಆಟವಾಡುತ್ತಿದ್ದ 18 ತಿಂಗಳ ಮಗು ಆಕಸ್ಮಿಕವಾಗಿ ಸುಮಾರು 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿತ್ತು.
ಬುಧವಾರ ಕೊಳವೆಬಾವಿಗೆ ಬಿದ್ದಿದ್ದ ಮಗುವನ್ನು ಸುಮಾರು 48 ಗಂಟೆಗಳ ಕಾರ್ಯಾಚರಣೆ ನಡೆಸಿ ಎನ್‌ಡಿಆರ್‌ಎಫ್ ಹಾಗೂ ಭಾರತೀಯ ಸೇನೆ ರಕ್ಷಿಸಿದೆ. ಮಗುವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸಲಾಗಿದೆ.
ಬುಧವಾರದ ಒಂದೂವರೆ ವರ್ಷದ ನದೀಪ್ ಆಟವಾಡುತ್ತಾ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ, ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಳವೆ ಬಾವಿ ತೋಡಿ ಮುಚ್ಚದೇ ಹಾಗೆ ಬಿಟ್ಟಿದ್ದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ