ತ್ರಿವಳಿ ತಲಾಕ್ ನಿಷೇಧ: ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ‘ಸುಪ್ರೀಂ’ನಲ್ಲಿ ವಜಾ!

ತ್ರಿವಳಿ ತಲಾಕ್ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
ತ್ರಿವಳಿ ತಲಾಕ್ ನಿಷೇಧ: ಸಾಂವಿಧಾನಿಕ ಸಿಂಧುತ್ವಪ್ರಶ್ನಿಸಿದ್ದ ಅರ್ಜಿ ‘ಸುಪ್ರೀಂ’ನಲ್ಲಿ ವಜಾ!
ತ್ರಿವಳಿ ತಲಾಕ್ ನಿಷೇಧ: ಸಾಂವಿಧಾನಿಕ ಸಿಂಧುತ್ವಪ್ರಶ್ನಿಸಿದ್ದ ಅರ್ಜಿ ‘ಸುಪ್ರೀಂ’ನಲ್ಲಿ ವಜಾ!
ನವದೆಹಲಿ: ತ್ರಿವಳಿ ತಲಾಕ್ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಶಿಕ್ಷಾರ್ಹ ಅಪರಾಧ ಎಂದು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು ಇದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.
ಕೇರಳ ಮೂಲದ ಜಮಾಯಿತುಲ್ ಉಲೇಮಾ ಸಂಘಟನೆ ಕೇಂದ್ರದ ಕಾನೂನನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು.ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ "ಈ ಸಂಬಂಧ ನಾವು ಯಾವುದೇ ಕಾರಣಕ್ಕೆ ಮದ್ಯ ಪ್ರವೇಶಿಸುವುದಿಲ್ಲ" ಎಂದು ಹೇಳೀದ್ದಲ್ಲದೆ ಅರ್ಜಿಯನ್ನು ವಜಾ ಮಾಡಿದೆ.
ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ತ್ರಿವಳಿ ತಲಾಕ್ ವಿರುದ್ಧ ತೀರ್ಪು ಪ್ರಕಟಿಸಿದ್ದು ಮುಸ್ಲಿಮರ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಆ ಸಮುದಾಯದಲ್ಲಿ ಅಸ್ತುತ್ವದಲ್ಲಿರುವ ತ್ರಿವಳಿ ತಲಾಕ್ ಕಾನೂನು ಬಾಹಿರವಾಗಿದೆ ಎಂದಿತ್ತು. ಈ ತೀರ್ಪಿನ ನಂತರ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ರಾಜ್ಯಸಭೆಯಲಿ ಸಹ ಮಂಡನೆ ಮಾಡಿದೆ. ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲದ ಕಾರಣ ಅದಿನ್ನೂ ಬಾಕಿ ಉಳಿದಿದ್ದು ಸರ್ಕಾರ ಸುಗ್ರೀವಾಜ್ಞೆ  ಹೊರಡಿಸಿ ತಲಾಕ್ ಪದ್ದತಿಯನ್ನು ನಿಷೇಧಿಸಿದೆ. ಮುಂದಿನ ದಿನದಲ್ಲಿ ರಾಜ್ಯಸಭೆ ಅನುಮೋದನೆ ಪಡೆದು ರಾಷ್ಟ್ರಪತಿಗಳ ಅಂಕಿತ ಬಿದ್ದದ್ದಾದರೆ ತ್ರಿವಳಿ ತಲಾಕ್ ಆಚರಣೆ ಅಧಿಕೃತವಾಗಿ ನಿಷೇಧಕ್ಕೆ ಒಳಗಾಗಲಿದೆ. ಇದಕ್ಕೆ ವಿರೋಧಿಸಿ ಕೆಲ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟದಲ್ಲಿ ತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com