ನವದೆಹಲಿ: ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ನೇಮಕಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಹಂಚಿಕೊಳ್ಳಲು ಕೇಂದ್ರವು ನಿರಾಕರಿಸಿದೆ.
ಮಂತ್ರಿಗಳು, ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳನ್ನೊಳಗೊಂಡ ದಾಖಲೆಗಳನ್ನು ಹಂಚಿಕೊಳ್ಳುವುದು ಪಾರದರ್ಶಕ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗಿದೆ
ಹಣಕಾಸು ಸೇವಾ ನಿಯಂತ್ರಣ ನೇಮಕ ಶೋಧನಾ ಸಮಿತಿ- ಎಫ್ ಎಸ್ ಆರ್ ಎಎಸ್ ಸಿ ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಸಂಪುಟ ಆರ್ ಬಿಐ ಗೌರ್ನರ್ ಆಯ್ಕೆ ಮಾಡುತ್ತದೆ ಎಂದು ಹಣಕಾಸು ಸೇವಾ ಇಲಾಖೆ ತಿಳಿಸಿದೆ.
ಸಂಪುಟ ಕಾರ್ಯದರ್ಶಿ ಈ ಸಮಿತಿ ಅಧ್ಯಕ್ಷರಾಗಿದ್ದು, ಪ್ರಧಾನ ಮಂತ್ರಿಗಳ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖೆಯ ಕಾರ್ಯದರ್ಶಿ ಹಾಗೂ ಹೊರಗಿನ ಮೂವರು ತಜ್ಞರು ಇದರ ಸದಸ್ಯರಾಗಿರುತ್ತಾರೆ.