ನನ್ನ ಹಣ ತೆಗೆದುಕೊಂಡು ಜೆಟ್ ಏರ್ ವೇಸ್ ಉಳಿಸಿ: ಬ್ಯಾಂಕುಗಳಿಗೆ ವಿಜಯ್ ಮಲ್ಯ ಹೇಳಿಕೆ
ನವದೆಹಲಿ: ಜೆಟ್ ಏರ್ ವೇಸ್ ವೈಮಾನಿಕ ಸಂಸ್ಥೆಯ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ಎನ್ ಡಿಎ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬ್ಯಾಂಕುಗಳು ದ್ವಿಮುಖ ನೀತಿ ಅನುಸರಿಸುತ್ತಿವೆ ಎಂದು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ವಾಗ್ದಾಳಿ ನಡೆಸಿದ್ದಾರೆ.
ಸರಣಿ ಟ್ವಿಟ್ ಪ್ರಕಟಿಸಿರುವ ವಿಜಯ್ ಮಲ್ಯ, ಆರ್ಥಿಕ ನಷ್ಟದಲ್ಲಿರುವ ಜೆಟ್ ಏರ್ ವೇಸ್ ಸಂಸ್ಥೆಯ ಮೇಲ್ವಿಚಾರಣೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಜೆಟ್ ಏರ್ ವೇಸ್ ಉದ್ಯೋಗಗಳು, ಸಂಪರ್ಕತೆ ಮತ್ತು ಉದ್ಯಮಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕ ಬ್ಯಾಂಕುಗಳು ಆರ್ಥಿಕ ಸಮಸ್ಯೆಯನ್ನು ಬಗೆಹರಿಸಲಿವೆ ಎಂಬುದುನ್ನು ಸಂತೋಷದಿಂದ ನೋಡುತ್ತಿರುವುದಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಕಿಂಗ್ ಪಿಶರ್ ಮತ್ತು ಜೆಟ್ ಏರ್ ಲೈನ್ಸ್ ಕಂಪನಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಬೇರೆ ರೀತಿಯಲ್ಲಿ ನೋಡುತ್ತಿದೆ. ಕಿಂಗ್ ಪಿಶರ್ ಏರ್ ಲೈನ್ಸ್ ಸಂಸ್ಥೆ ಹಾಗೂ ಅಲ್ಲಿನ ಉದ್ಯೋಗಿಗಳನ್ನು ರಕ್ಷಿಸಲು 4 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿರುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ