ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

'ಮೈನ್ ಭೀ ಚೌಕಿದಾರ್ 'ಪ್ರಚಾರಾಂದೋಲನ ಬೆಂಬಲಿಗರೊಂದಿಗೆ ಪ್ರಧಾನಿ ಮೋದಿ ಸಂವಾದ

ಎಲ್ಲಾ ಲೋಕಸಭಾ ಕ್ಷೇತ್ರದ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನದ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಸಂವಾದ ನಡೆಸಲಿದ್ದಾರೆ.

ನವದೆಹಲಿ: ಎಲ್ಲಾ ಲೋಕಸಭಾ ಕ್ಷೇತ್ರದ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನದ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಸಂವಾದ ನಡೆಸಲಿದ್ದಾರೆ.

ಟೌನ್ ಹಾಲ್ ನಲ್ಲಿ  ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದು, ಸುಮಾರು 5 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ.ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ  ಸುಮಾರು 500 ಕಡೆಗಳಲ್ಲಿ ಸ್ಥಾಪಿಸಿರುವ ವಿಡಿಯೋ ಕಾನ್ಪೆರೆನ್ಸ್ ಮೂಲಕ ಲಕ್ಷಾಂತರ ಬೆಂಬಲಿಗರೊಂದಿಗೆ ಸಂವಾದ ನಡೆಸಲಿದ್ದಾರೆ.

ಸಂಜೆ 5 ಗಂಟೆಗೆ ನಿಗದಿಯಾಗಿರುವ ಕಾರ್ಯಕ್ರಮವನ್ನು ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಐತಿಹಾಸಿಕ ಮೈನ್ ಬೀ ಚೌಕಿದಾರ್ ಕಾರ್ಯಕ್ರಮದಲ್ಲಿ ದೇಶದ ವಿವಿಧ ಕಡೆಗಳಲ್ಲಿನ ಲಕ್ಷಾಂತರ ಚೌಕಿದಾರರೊಂದಿಗೆ ಮಾತುಕತೆ ನಡೆಸಲಿದ್ದು, ಅದನ್ನು ತಪ್ಪಿಸಿಕೊಳ್ಳದಂತೆ  ಮನವಿ ಮಾಡಿದ್ದಾರೆ.

ವಿವಿಧ ವೃತ್ತಿಪರರ ವಿಶೇಷವಾಗಿ ಯುವ ಜನರು ಸಂವಾದದಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ, ಈ ವೃತ್ತಿಪರರು ಶಕ್ತಿಯನ್ನು ತುಂಬಲಿದ್ದಾರೆ. ಅವರ ಶ್ರಮದಿಂದ 21 ನೇ ಶತಮಾನದ ನವ ಭಾರತವಾಗಿ ಹೊರಹೊಮ್ಮುವಲ್ಲಿ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಚೌಕಿದಾರ್ ಚೋರ್ ಹೈ ಟೀಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಪ್ರಧಾನಿ ಮೋದಿ ಮಾರ್ಚ್ 16 ರಂದು ಮೈ ಭೀ ಚೌಕಿದಾರ್ ಪ್ರಚಾರ ಆರಂಭಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com