ಬುರ್ಖಾ ನಿಷೇಧಿಸುವುದರಿಂದ ಭಯೋತ್ಪಾದನೆ ನಿಲ್ಲುವುದಿಲ್ಲ, ಆದರೆ: ತಸ್ಲಿಮಾ ನಸ್ರೀನ್

ಬುರ್ಖಾ ನಿಷೇಧಿಸುವುದರಿಂದ ಭಯೋತ್ಪಾದನೆ ನಿಲ್ಲುವುದಿಲ್ಲ ಎಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಖಂಡಿತ ಮಹಿಳೆಯರು ಮುಖವಿಲ್ಲದೆ ಬದುಕುವುದನ್ನು ...
ತಸ್ಲಿಮಾ ನಸ್ರೀನ್
ತಸ್ಲಿಮಾ ನಸ್ರೀನ್
ನವದೆಹಲಿ: ಬುರ್ಖಾ ನಿಷೇಧಿಸುವುದರಿಂದ ಭಯೋತ್ಪಾದನೆ ನಿಲ್ಲುವುದಿಲ್ಲ ಎಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಖಂಡಿತ ಮಹಿಳೆಯರು ಮುಖವಿಲ್ಲದೆ ಬದುಕುವುದನ್ನು ತಡೆಯುತ್ತದೆ ಎಂದು ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ,
ಈ ಸಂಬಂಧ ಟ್ವೀಟ್ ಮಾಡಿರುವ ತಸ್ಲಿಮಾ ನಸ್ರೀನ್. ಬುರ್ಖಾ ನಿಷೇಧದಿಂದ ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಂಡಂತೆ ಆಗುತ್ತದೆ ಎಂದು ತುಂಬಾ ಜನರು ಹೇಳುತ್ತಿದ್ದಾರೆ. ನಂತರ ಹತ್ಯೆ ಮಾಡುವುದನ್ನು ನಿಷೇಧಿಸಿದರೆ ಇಂತಹವರು ಅದನ್ನೂ ಧಾರ್ಮಿಕ ಸ್ವಾತಂತ್ರ್ಯ ಹರಣ ಎನ್ನುತ್ತಾರೆ. 
ಯಾರಿಗೆ ಇಸ್ಲಾಂನಲ್ಲಿ ನಂಬಿಕೆಯಿಲ್ಲವೋ ಅವರ ವಿರುದ್ಧ ಹೋರಾಡಿ ಎಂದು ಪವಿತ್ರ ಖುರಾನ್​ ತನ್ನಲ್ಲಿ ನಂಬಿಕೆ ಇರುವವರ ಬಳಿ ಕೇಳಿಕೊಳ್ಳುತ್ತದೆ. ಆದರೆ ಇನ್ನೊಬ್ಬರಿಗೆ ಹಾನಿ ಮಾಡಿ ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಅನುಭವಿಸುವ ಮನಸ್ಥಿತಿಯನ್ನು ಯಾರೂ ಹೊಂದಬಾರದು ಎಂದು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯ ನಂತರ ಅಲ್ಲಿ ಭದ್ರತಾ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಏ. 29ರಿಂದ ಬುರ್ಖಾವನ್ನೂ ನಿಷೇಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com