ಸಂಗ್ರಹ ಚಿತ್ರ
ದೇಶ
ಲಿಫ್ಟ್ ಇಲ್ಲದೆಯೂ ಓಪನ್ ಆಯ್ತು ಡೋರ್, ಒಳಗೆ ಕಾಲಿಟ್ಟ ಮಹಿಳೆ ಆಳಕ್ಕೆ ಬಿದ್ದು ಸಾವು!
ಕಲ್ಯಾಣ ಮಂಟಪವೊಂದರ ಲಿಫ್ಟ್ ವೈಫಲ್ಯದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಂದ್ಲಾಗುಂಡಾದಲ್ಲಿ ನಡೆದಿದೆ.
ಹೈದರಾಬಾದ್: ಕಲ್ಯಾಣ ಮಂಟಪವೊಂದರ ಲಿಫ್ಟ್ ವೈಫಲ್ಯದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಂದ್ಲಾಗುಂಡಾದಲ್ಲಿ ನಡೆದಿದೆ.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕಲಾಮಮ್ಮ ಮೂರನೇ ಮಹಡಿಯಿಂದ ಕೆಳ ಮಹಡಿಗೆ ತೆರಳಲು ಲಿಫ್ಟ್ ಬಟನ್ ಒತ್ತಿದ್ದಾರೆ. ಈ ವೇಳೆ ಲಿಫ್ಟ್ ಇಲ್ಲದೆಯೇ ಬಾಗಿಲು ತೆರೆದುಕೊಂಡಿದ್ದು, ಒಳಗೆ ಕಾಲಿಟ್ಟೊಡನೆ ಆಕೆ ಆಳದ ಲಿಫ್ಟ್ ಗುಂಡಿಗೆ ಬಿದ್ದಿದ್ದಾರೆ.
ಆಘಾತಕಾರಿ ಸುದ್ದಿ ತಿಳಿಯುತ್ತಿದ್ದಂತೆ ಕಲಾಮಮ್ಮ ಬಂಧುಗಳು, ಕಲ್ಯಾಣ ಮಂಟಪದ ಮಾಲೀಕರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಘಟನೆ ನಡೆದ ಮರುಕ್ಷಣವೇ ಆತ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

