ಗೋಧ್ರಾ ಹತ್ಯಾಕಾಂಡವನ್ನು ಯಾರಾದರೂ ಮೋದಿಗೆ ತಳುಕುಹಾಕಿದರೆ ಏನಾಗುತ್ತೆ?: ಅಮರಿಂದರ್ ಸಿಂಗ್

1984 ರ ಸಿಖ್ ವಿರೋಧಿ ದಂಗೆಯನ್ನು ರಾಜೀವ್ ಗಾಂಧಿ ಅವರಿಗೆ ತಳುಕು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ನಡೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್
Updated on
ಚಂಡೀಗಢ: 1984 ರ ಸಿಖ್ ವಿರೋಧಿ ದಂಗೆಯನ್ನು ರಾಜೀವ್ ಗಾಂಧಿ ಅವರಿಗೆ ತಳುಕು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ನಡೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಸಿಂಖ್ ದಂಗೆಗೂ ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ನಡೆದ ಗೋಧ್ರಾ ದಂಗೆಗೂ ಹೋಲಿಕೆ ಮಾಡಿರುವ ಅಮರಿಂದರ್ ಸಿಂಗ್ ಗೋಧ್ರಾ ಹತ್ಯಾಕಾಂಡವನ್ನು ಮೋದಿಗೆ ತಳುಕು ಹಾಕಿದರೆ ಏನಾಗುತ್ತೆ? ಎಂದು ಪ್ರಶ್ನಿಸಿದ್ದಾರೆ. 
1984 ರ ಸಿಖ್ ವಿರೋಧಿ ದಂಗೆಗೆ ರಾಜೀವ್ ಗಾಂಧಿ ಅವರನ್ನು ಹೊಣೆ ಮಾಡುವುದು ತಪ್ಪು, ಗೋಧ್ರಾ ಗಲಭೆಗೆ ಮೋದಿಯನ್ನು ಯಾರಾದರೂ ಹೊಣೆ ಮಾಡಿದರೆ ಹೇಗಿರುತ್ತೆ?  ಚುನಾವಣೆ ಗೆಲ್ಲುವುದಕ್ಕಾಗಿ ಪ್ರಧಾನಿಯೊಬ್ಬರು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com