ಏರ್ ಇಂಡಿಯಾ ಕ್ಯಾಪ್ಟನ್ ನಿಂದ ಮಹಿಳಾ ಪೈಲಟ್ ಗೆ ಲೈಂಗಿಕ ಕಿರುಕುಳ: ತನಿಖಾ ಸಮಿತಿ ರಚನೆ

ಏರ್ ಇಂಡಿಯಾ ಕ್ಯಾಪ್ಟನ್ ವಿರುದ್ಧ ಮಹಿಳಾ ಪೈಲಟ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಏರ್ ಇಂಡಿಯಾ ಕ್ಯಾಪ್ಟನ್ ವಿರುದ್ಧ ಮಹಿಳಾ ಪೈಲಟ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿದೆ ಎಂದು ಬುಧವಾರ ಏರ್ ಇಂಡಿಯಾ ತಿಳಿಸಿದೆ.
ಮಹಿಳಾ ಪೈಲಟ್ ನೀಡಿದ ದೂರಿನ ಪ್ರಕಾರ, ಮೇ 5ರಂದು ಹೈದರಾಬಾದ್ ನಲ್ಲಿ ಕಮಾಂಡರ್ ಮಹಿಳೆಗೆ ಕಿರುಕುಳ ನೀಡಿದ್ದು, ಪ್ರಕರಣ ನಮ್ಮ ಗಮನಕ್ಕೆ ಬರುತ್ತಿದ್ದಂತೆ ನಾವು ತಕ್ಷಣ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ್ದೇವೆ ಎಂದು ಏರ್ ಇಂಡಿಯಾ ತಿಳಿಸಿದೆ.
ಮಹಿಳಾ ಪೈಲಟ್ ಲೈಂಗಿಕ ಜೀವನ ಸೇರಿದಂತೆ​ ಖಾಸಗಿ ವಿಷಯದ ಕುರಿತು ಅಸಂಬದ್ಧ ಪ್ರಶ್ನೆ ಕೇಳಿದ ಆರೋಪದ ಮೇಲೆ ಈ ಕ್ರಮಕ್ಕೆ ಆದೇಶಿಸಲಾಗಿದೆ. ಹಿರಿಯ ಕ್ಯಾಪ್ಟನ್​ ವಿರುದ್ಧ ದೂರು ದಾಖಲಿಸಿರುವ ಮಹಿಳಾ ಪೈಲಟ್​ ಘಟನೆಯ ವಿವರವನ್ನು ತಿಳಿಸಿದ್ದಾರೆ.
ಹಿರಿಯ ಕ್ಯಾಪ್ಟನ್​ ಜೊತೆ ಹಲವಾರು ಬಾರಿ ಒಟ್ಟಿಗೆ ವಿಮಾನ ಹಾರಾಟ ನಡೆಸಿದ್ದೆ. ಅವರು ಸಭ್ಯಸ್ಥರಂತೆ ಕಂಡು ಬಂದಿದ್ದರು. ಈ ಹಿನ್ನೆಲೆಯಲ್ಲಿ ತರಬೇತಿ ಅವಧಿ ಬಳಿಕ ಅವರೊಟ್ಟಿಗೆ ರಾತ್ರಿ ಊಟಕ್ಕೆ ತೆರಳಿದ್ದೆ. ಮೇ 5ರಂದು ಹೈದ್ರಾಬಾದ್​ನ ರೆಸ್ಟೋರೆಂಟ್​​ನಲ್ಲಿ ಊಟಕ್ಕೆ ಕುಳಿತಾಗ ತಮ್ಮ ಸಂಸಾರಿಕ ಜೀವನ ಕುರಿತು ಮಾತು ಆರಂಭಿಸಿದ ಕ್ಯಾಪ್ಟನ್​ ತಮ್ಮ ದಾಂಪತ್ಯದಲ್ಲಿ ಅತೃಪ್ತಿಕರ ಹಾಗೂ ನೋವು, ಖಿನ್ನತೆಗಳಿಂದ ಬಳಲುತ್ತಿರುವ ಬಗ್ಗೆ ತಿಳಿಸಿದರು. ಈ ವೇಳೆ ವಿಮಾನ ಪ್ರಯಾಣದ ವೇಳೆ ನಿಮ್ಮ ಗಂಡನ ಅಗಲಿಕೆಯ ವಿರಹವನ್ನು ಹೇಗೆ ನಿಭಾಯಿಸುತ್ತೀರಾ. ಈ ಸಂದರ್ಭದಲ್ಲಿ ಪ್ರತಿದಿನ ಲೈಂಗಿಕ ಕ್ರಿಯೆ ಅವಶ್ಯಕತೆ ಇಲ್ಲವೇ ಎಂದು ಪ್ರಶ್ನಿಸಿದರು. ಅವರ ಮಾತನ್ನು ಕೇಳಿ ಆ ಕೂಡಲೇ ನಿಮ್ಮೊಟ್ಟಿಗೆ ಮಾತನಾಡಲು ನನಗೆ ಇಚ್ಛೆಯಿಲ್ಲ ಎಂದು ಹೇಳಿ ಅರ್ಧದಲ್ಲೇ ಎದ್ದು ಬಂದೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com