ಒಬೆರಾಯ್ ಹೊಟೆಲ್ ನಲ್ಲಿ ಪ್ರಿಯಾ ರಮಣಿ ಭೇಟಿ ಮಾಡಿಲ್ಲ- ಎಂಜೆ ಅಕ್ಬರ್

ಸಂದರ್ಶನಕ್ಕಾಗಿ ಪತ್ರಕರ್ತೆ ಪ್ರಿಯಾ ರಮಣಿಯನ್ನು ಹೊಟೇಲ್ ಒಬೆರಾಯ್ ನಲ್ಲಿ ಭೇಟಿ ಮಾಡಿರುವ ಆರೋಪವನ್ನು ಮಾಜಿ ಪತ್ರಕರ್ತ, ಮಾಜಿ ಕೇಂದ್ರ ಸಚಿವ ಎಂ.ಜೆ ತಿರಸ್ಕರಿಸಿದ್ದಾರೆ.
ಒಬೆರಾಯ್ ಹೊಟೆಲ್ ನಲ್ಲಿ ಪ್ರಿಯಾ ರಮಣಿ ಭೇಟಿ ಮಾಡಿಲ್ಲ- ಎಂಜೆ ಅಕ್ಬರ್
ಒಬೆರಾಯ್ ಹೊಟೆಲ್ ನಲ್ಲಿ ಪ್ರಿಯಾ ರಮಣಿ ಭೇಟಿ ಮಾಡಿಲ್ಲ- ಎಂಜೆ ಅಕ್ಬರ್
Updated on
ನವದೆಹಲಿ: ಸಂದರ್ಶನಕ್ಕಾಗಿ ಪತ್ರಕರ್ತೆ ಪ್ರಿಯಾ ರಮಣಿಯನ್ನು ಹೊಟೇಲ್ ಒಬೆರಾಯ್ ನಲ್ಲಿ ಭೇಟಿ ಮಾಡಿರುವ ಆರೋಪವನ್ನು ಮಾಜಿ ಪತ್ರಕರ್ತ, ಮಾಜಿ ಕೇಂದ್ರ ಸಚಿವ ಎಂ.ಜೆ ತಿರಸ್ಕರಿಸಿದ್ದಾರೆ. 
ಡಿ.1993 ರಲ್ಲಿ ಅಂದು ಪತ್ರಕರ್ತರಾಗಿದ್ದ ಎಂ.ಜೆ ಅಕ್ಬರ್ ತಮ್ಮನ್ನು ಹೊಟೇಲ್ ಒಬೆರಾಯ್ ನಲ್ಲಿ ಸಂದರ್ಶಿಸಿದ್ದಾಗ ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಪ್ರಶ್ನೆಗಳನ್ನೇ ಕೇಳುತ್ತಿದ್ದರು ಎಂದು ಆರೋಪಿಸಿದ್ದರು. 
"ನಾನು ಪ್ರಿಯಾ ರಮಣಿಯವರನ್ನು ಹೊಟೇಲ್ ನಲ್ಲಿ ಭೇಟಿ ಮಾಡಿಯೇ ಇಲ್ಲ. ಅಂದಮೇಲೆ ನಾನು ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿಲ್ಲ ಎಂಬುದು ತಪ್ಪಾಗುತ್ತದೆ" ಎಂದು ಎಂಜೆ ಅಕ್ಬರ್ ಹೇಳಿದ್ದಾರೆ.  
ತಮ್ಮ ವಿರುದ್ಧ #MeToo ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಪತ್ರಕರ್ತೆ ವಿರುದ್ಧ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕುರಿತ ವಿಚಾರಣೆಯ ವೇಳೆ ಎಂಜೆ ಅಕ್ಬರ್ ಈ ಹೇಳಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com