ಸುಪ್ರೀಂ ಕೋರ್ಟ್
ದೇಶ
ಕಪ್ಪು ಹಣ ಕಾಯ್ದೆ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
2016ರ ಕಪ್ಪು ಹಣ ಕಾಯ್ದೆಯನ್ನು 2015ರ ಜುಲೈ ಯಿಂದ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಮಂಗಳವಾರ...
ನವದೆಹಲಿ: 2016ರ ಕಪ್ಪು ಹಣ ಕಾಯ್ದೆಯನ್ನು 2015ರ ಜುಲೈ ಯಿಂದ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ರಜಾ ಕಾಲದ ಪೀಠ, ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ಗೌತಮ್ ಖೈತಾನ್ ವಿರುದ್ಧ ಕಪ್ಪು ಹಣ ಕೇಸನ್ನು ದಾಖಲಿಸಲಾಗಿದ್ದು, ಆತನ ವಿರುದ್ದದ ಐಟಿ ಅಧಿಕಾರಿಗಳ ಕಾನೂನು ಕ್ರಮಕ್ಕೂ ತಡೆ ನೀಡಿದೆ.
ಇದೇ ವೇಳೆ ಆರೋಪಿ ಗೌತಮ್ ಖೈತಾನ್ ಗೆ ನೊಟೀಸ್ ಜಾರಿ ಮಾಡಿರುವ ಸುಪ್ರೀಂ ಕೋರ್ಟ್, ಸರ್ಕಾರದ ಮನವಿಗೆ ಆರು ವಾರಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ.
ಕಪ್ಪು ಹಣ ಹೊಂದಿರುವವರ ವಿರುದ್ಧ ಪ್ರಕರಣ ದಾಖಲಿಸುವುದು ಮತ್ತು ತನಿಖೆ ನಡೆಸಲು ಅವಕಾಶ ನೀಡುವ 2016ರ ಕಪ್ಪು ಹಣ ಕಾಯ್ದೆಯನ್ನು 2015ರ ಜುಲೈನಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿದ್ದ ಆಧಿಸೂಚನೆಗೆ ದೆಹಲಿ ಹೈಕೋರ್ಟ್ ತಡೆ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ