ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್

ಸೋಲನ್ನು ಒಪ್ಪಿಕೊಳ್ಳಿ, ಇವಿಎಂ ದೂಷಿಸಬೇಡಿ: ರವಿಶಂಕರ್ ಪ್ರಸಾದ್

ವಿದ್ಯುನ್ಮಾನ ಮತಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುವ ಬದಲು ಪ್ರತಿಪಕ್ಷಗಳು ಸೋಲನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ...
ನವದೆಹಲಿ:  ವಿದ್ಯುನ್ಮಾನ ಮತಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುವ ಬದಲು ಪ್ರತಿಪಕ್ಷಗಳು ಸೋಲನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕರೆ ನೀಡಿದ್ದಾರೆ.
ಮತ್ತೊಂದು ಬಾರಿಯೂ ನರೇಂದ್ರ ಮೋದಿ ಅವರು ಭರ್ಜರಿ ಬಹುಮತದೊಂದಿಗೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿರುವ ಅವರು ವಿಪಕ್ಷಗಳು ಸೋಲನ್ನು ಒಪ್ಪಿಕೊಳ್ಳಲೇಬೇಕಾಗಿದೆ ಎಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ, ಎನ್ ಚಂದ್ರಬಾಬು ನಾಯ್ಡು ಮತ್ತು ಅಮರೀಂದರ್ ಸಿಂಗ್ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಲು ಯಾವುದೇ ತೊಂದರೆಯಾಗಲಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮಾತ್ರ ಇವಿಎಂ ಸರಿ ಇರೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಎರಡು ಬಾರಿ ಪಶ್ಚಿಮಬಂಗಾಳ ಮುಖ್ಯಮಂತ್ರಿಯಾದಾಗ ಮಮತಾ ಬ್ಯಾನರ್ಜಿಗೆ ಇವಿಎಂ ಉತ್ತಮವಾಗಿತ್ತು. ಅಮರೀಂದರ್ ಸಿಂಗ್ ಗೆ ಪಂಜಾಬ್ ಮುಖ್ಯಮಂತ್ರಿಯಾದಾಗಲೂ ಇವಿಎಂ ಸರಿ ಇತ್ತು. ಒಂದು ವೇಳೆ ಅವರು ಗೆದ್ದರೆ ಇವಿಎಂ ಸರಿ ಇದೆ ಎಂದು ಅರ್ಥ! ಆದರೆ ದೇಶದ ಜನರು ಬಯಸಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ..ಆಗ ಇವಿಎಂ ಅನ್ನು ನಂಬುವಂತಿಲ್ಲ ಎಂದು ಟೀಕಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com