ಭುವನೇಶ್ವರ್: ಸತತ 5 ನೇ ಬಾರಿಗೆ ಒಡಿಶಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಿಜೆಡಿ ನಾಯಕ ನವೀನ್ ಪಟ್ನಾಯಕ್, ಬಿಜೆಪಿಯೊಂದಿಗಿನ ಸಹಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. .ಬಿಜೆಪಿಯೊಂದಿಗೆ ರಚನಾತ್ಮಕ ಸಹಕಾರದಲ್ಲಿ ಕೆಲಸ ಮಾಡಲು ಸಿದ್ಧವಿರುವುದಾಗಿ ಪಟ್ನಾಯಕ್ ತಿಳಿಸಿದ್ದಾರೆ. .ಒಡಿಶಾದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ರಚನಾತ್ಮಕ ಸಹಕಾರದೊಂದಿಗೆ ಮುಂದುವರೆಯಲು ಮುಕ್ತವಾಗಿರುವುದಾಗಿ ನವೀನ್ ಪಟ್ನಾಯಕ್ ಹೇಳಿದ್ದಾರೆ. .ರಚನಾತ್ಮಕ ಸಹಕಾರ ಎಂದಮಾತ್ರಕ್ಕೆ ಬಿಜೆಪಿಗೆ ಬೆಂಬಲ ಘೋಷಣೆ ಎಂದು ತಿಳಿಯಬೇಕಿಲ್ಲ ಎಂದು ನವೀನ್ ಪಟ್ನಾಯಕ್ ತಿಳಿಸಿದ್ದಾರೆ. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics