ಆಪ್ತನ ಕೊಲೆ: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಸಿದ್ದ ಎಂದ ಸ್ಮೃತಿ ಇರಾನಿ

ತಮ್ಮ ಆಪ್ತನಾಗಿದ್ದ ಸುರೇಂದ್ರ ಸಿಂಗ್ ಹತ್ಯೆ ವಿಚಾರವನ್ನು ತನಿಖೆ ನಡೆಅಲು ಆಗ್ರಹಿಸಿ ತಾವು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಅಮೇಥಿ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಹೇಳಿದ್ದಾರೆ.
ಆಪ್ತನ ಕೊಲೆ: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಸಿದ್ದ ಎಂದ ಸ್ಮೃತಿ ಇರಾನಿ
ಆಪ್ತನ ಕೊಲೆ: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಸಿದ್ದ ಎಂದ ಸ್ಮೃತಿ ಇರಾನಿ
ಅಮೇಥಿ: ತಮ್ಮ ಆಪ್ತನಾಗಿದ್ದ ಸುರೇಂದ್ರ ಸಿಂಗ್ ಹತ್ಯೆ ವಿಚಾರವನ್ನು ತನಿಖೆ ನಡೆಅಲು ಆಗ್ರಹಿಸಿ ತಾವು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಅಮೇಥಿ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಹೇಳಿದ್ದಾರೆ.
ಶನಿವಾರ ತಡರಾತ್ರಿ ವಿಜಯೋತ್ಸವ ಆಚರಣೆಯ ಬಳಿಕ ಅಮೇಥಿ ಬಿಜೆಪಿ ನಾಯಕ, ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಅವ್ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದು ರಾಜಲೀಯ ದ್ವೇಷದಿಂದಾದ ಕೊಲೆ ಎಂದು ಶಂಕಿಸಿರುವ ಪೋಲೀಸರು ಇದುವರೆಗೆ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಿಜೆಪಿ ಪಕ್ಷದ ಗ್ರಾಮ ಮುಖ್ಯಸ್ಥನಾಗಿದ್ದ ಸುರೇಂದ್ರ ಸಿಂಗ್ ಹತ್ಯೆ ಸಂಬಂಧ ತಾವು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇ:ಳಿರುವ ಇರಾನಿ "ಅಗತ್ಯಬಿದ್ದಲ್ಲಿ ಕೊಲೆಗಡುಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಕೋರ್ಟ್ ಗೆ ಮನವಿ ಸಲ್ಲಿಸುತ್ತೇನೆ" ಎಂದಿದ್ದಾರೆ.
ಕಾಂಗ್ರೆಸ್, ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಈ ಬಾರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಜಯ ಸಾಧಿಸಿದ್ದಾರೆ.
ಶನಿವಾರ ತಡರಾತ್ರಿ, ಭಾನುವಾರ ನಸುಕಿನ ವೇಳೆ ಬರೋಲಿ ಗ್ರಾಮದ ಮುಖ್ಯಸ್ಥನಾಗಿದ್ದ ಸುರೇಂದ್ರ ಸಿಂಗ್ ಅಪರಿಚಿತ ವ್ಯಕ್ತಿಗಳ ಗುಂಡೇಟಿಗೆ ಬಲಿಯಾದರು. ಅವರು ಮಲಗಿದ್ದಾಗ ಆತನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ಸುರಿಮಳೆಗೆರೆದು ಹತ್ಯೆ ಮಾಡಿದ್ದಾರೆ.ಅವರ ಮಗ ಅಭಯ್ ಸಿಂಗ್ ಈ ಕುರಿತು ಮಾದ್ಯಮಗಳಿಗೆ ತಿಳಿಸಿದ್ದಾರೆ.ಕೊಲೆ ಪ್ರಕರಣದಲ್ಲಿ ಏಳು ಜನರನ್ನು ಬಂಧಿಸಲಾಗಿದೆ.
ಸುರೇಂದ್ರ ಸಿಂಗ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಸಂಸದೆ "ಸುರೇಂದ್ರ ಸಿಂಗ್ ಜಿ ಕುಟುಂಬದ ಮುಂದೆ ನಾನು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದೇನೆ, ಅವರ ಕೊಲೆ ಮಾಡಿದ ಹಾಗೂ ಕೊಲೆಗೆ ಸುಪಾರಿ ಕೊಟ್ಟವರನ್ನು ನಾನು ಸುಪ್ರೀಂ ಕೋರ್ಟ್ ಗೆ ಎಳೆಯುತ್ತೇನೆ. ಅವರಿಗೆ ಮರಣದಂಡನೆ ವಿಧಿಸಲು ನಾನು ಆಗ್ರಹಿಸುತ್ತೇನೆ. ಇದಕ್ಕಾಗಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com