2 ಕಿ.ಮೀ.ಉದ್ದದ ಅನಾಕೊಂಡ ರೈಲು
ದೇಶ
ಭಾರತೀಯ ರೈಲ್ವೆಯಿಂದ ದಾಖಲೆ: 2 ಕಿ.ಮೀ.ಉದ್ದದ 'ಅನಾಕೊಂಡ' ರೈಲಿನ ಪ್ರಾಯೋಗಿ ಸಂಚಾರ ಯಶಸ್ವಿ
ಛತ್ತೀಸ್ ಗಢದ ಆಗ್ನೇಯ ಕೇಂದ್ರ ರೈಲ್ವೆ ಹೊಸ ದಾಖಲೆ ಸೃಷ್ಟಿಸಿದ್ದು, ಬರೊಬ್ಬರಿ ಎರಡು ಕಿ.ಮೀ. ಉದ್ದದ ಗೂಡ್ಸ್ ರೈಲಿನ ಮೊದಲ ಪ್ರಾಯೋಗಿಕ ಸಂಚಾರದಲ್ಲಿ ಯಶಸ್ವಿಯಾಗಿದೆ.
ರಾಯ್‍ಪುರ: ಛತ್ತೀಸ್ ಗಢದ ಆಗ್ನೇಯ ಕೇಂದ್ರ ರೈಲ್ವೆ ಹೊಸ ದಾಖಲೆ ಸೃಷ್ಟಿಸಿದ್ದು, ಬರೊಬ್ಬರಿ ಎರಡು ಕಿ.ಮೀ. ಉದ್ದದ ಗೂಡ್ಸ್ ರೈಲಿನ ಮೊದಲ ಪ್ರಾಯೋಗಿಕ ಸಂಚಾರದಲ್ಲಿ ಯಶಸ್ವಿಯಾಗಿದೆ.
ಇದೀಗ ಈ ಎರಡು ಕಿ.ಮೀ. ಉದ್ದದ ಅನಾಕೊಂಡ ರೈಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗ್ನೇಯ ಕೇಂದ್ರ ರೈಲ್ವೆ ಪ್ರಾಯೋಗಿಕ ಪರೀಕ್ಷೆ ಬಹುತೇಕ ಯಶಸ್ವಿಯಾಗಿದ್ದು, ಇದರಿಂದ ಮಾನವ ಸಂಪನ್ಮೂಲ ಮತ್ತು ಸಮಯ ಉಳಿತಾಯವಾಗಲಿದೆ.
ಈ ಅನಾಕೊಂಡ ರೈಲು ಒಟ್ಟು 177 ವ್ಯಾಗನ್ ಗಳು, ಮೂರು ಬ್ರೇಕ್ ಸೇರಿದಂತೆ ನಾಲ್ಕು ಎಂಜಿನ್ ಒಳಗೊಂಡಿದ್ದು, ಭಿಲಯೈ ಮತ್ತು ಕೊರ್ಬಾ ರೈಲು ನಿಲ್ದಾಣಗಳ ಮಧ್ಯ ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿದೆ.
ಈ ರೈಲು ಎಲ್ಲಾ ಪ್ರಾಯೋಗಿಕ ಪರೀಕ್ಷೆಯ ಯಶಸ್ಸಿನ ಬಳಿಕ ಎರಡು ತಿಂಗಳ ನಂತರ ಅಧಿಕೃತವಾಗಿ ಸಂಚರಿಸಲಿದೆ. 177 ವ್ಯಾಗನ್ ಗಳನ್ನು ಮೂರು ಲೋಕೋಮೋಟಿವ್ (ಎಂಜಿನ್) ಎಳೆಯಲಿವೆ. ಇಂಧನವಾಗಿ ಡಿಸೇಲ್ ಬಳಸಲಾಗುತ್ತದೆ. ಮೂರು ಲೋಕೋಮೋಟಿವ್ ಗಳನ್ನು ಓರ್ವ ಲೋಕೋಪೈಲಟ್ ಮತ್ತು ಸಹಾಯಕ ನಡೆಸಲಿದ್ದಾರೆ.
177 ವ್ಯಾಗನ್ ಹೊಂದಿರುವ ರೈಲಿನ ಉದ್ದವೇ ಬರೋಬ್ಬರಿ 2 ಕಿ.ಮೀ. ಇರಲಿದೆ. ಭಿಲೈ ನಿಲ್ದಾಣದಿಂದ ಸಂಜೆ 5.30ಕ್ಕೆ ಪ್ರಯಾಣ ಆರಂಭಿಸಿದ ರೈಲು ರಾತ್ರಿ 11 ಗಂಟೆಗೆ ಕೊರ್ಬಾ ನಿಲ್ದಾಣ ತಲುಪಿದೆ. ರೆನಡೆಲ್ಯಾಟ್ ಸಿಸ್ಟಮ್ ತಂತ್ರಜ್ಞಾನ ಆಧಾರದಲ್ಲಿ ಆನಾಕೊಂಡ ರೈಲಿನ ಎಲ್ಲ ಎಂಜಿನ್ ಗಳು ಒಂದೇ ವೇಗದಲ್ಲಿ ಚಲಿಸುತ್ತವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ