ಎನ್ ಆರ್ ಸಿ ಪಟ್ಟಿಯಲ್ಲಿ ನಿವೃತ್ತ ಯೋಧನ ಹೆಸರು ನಾಪತ್ತೆ: ಪ್ರಕ್ರಿಯೆಗಳಿಗೆ ಕತ್ತರಿ ಬೇಡ ಎಂದು ಸುಪ್ರೀಂ ತರಾಟೆ!

ಅಸ್ಸಾಂ ನಲ್ಲಿ ಎನ್ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ)ಯಲ್ಲಿ ಬಿಟ್ಟು ಹೋಗಿರುವ ಹೆಸರುಗಳನ್ನು ಸೇರ್ಪಡೆಗೊಳಿಸುವುದಕ್ಕೆ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಎನ್ ಆರ್ ಸಿಯ ಸಂಯೋಜಕರಿಗೆ
ಗಡುವು ಮೀರದಿರುವುದಕ್ಕೆ ಪ್ರಕ್ರಿಯೆಗಳಿಗೆ ಕತ್ತರಿ ಬೇಡ: ಎನ್ ಆರ್ ಸಿ ಪಟ್ಟಿಯಲ್ಲಿ ನಿವೃತ್ತ ಯೋಧನ ಹೆಸರು ನಾಪತ್ತೆಗೆ ಸುಪ್ರೀಂ ತರಾಟೆ!
ಗಡುವು ಮೀರದಿರುವುದಕ್ಕೆ ಪ್ರಕ್ರಿಯೆಗಳಿಗೆ ಕತ್ತರಿ ಬೇಡ: ಎನ್ ಆರ್ ಸಿ ಪಟ್ಟಿಯಲ್ಲಿ ನಿವೃತ್ತ ಯೋಧನ ಹೆಸರು ನಾಪತ್ತೆಗೆ ಸುಪ್ರೀಂ ತರಾಟೆ!
ನವದೆಹಲಿ: ಅಸ್ಸಾಂ ನಲ್ಲಿ ಎನ್ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ)ಯಲ್ಲಿ ಬಿಟ್ಟು ಹೋಗಿರುವ ಹೆಸರುಗಳನ್ನು ಸೇರ್ಪಡೆಗೊಳಿಸುವುದಕ್ಕೆ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಎನ್ ಆರ್ ಸಿಯ ಸಂಯೋಜಕರಿಗೆ ಹೇಳಿದೆ. 
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರ ನೇತೃತ್ವದ ಪೀಠ ಎನ್ ಆರ್ ಸಿ ಸಂಯೋಜಕರಿಗೆ ಗಡುವು ಮೀರದಿರುವುದಕ್ಕಾಗಿ ಪ್ರಕ್ರಿಯೆಗಳಿಗೆ ಕತ್ತರಿ ಬೇಡ  ಎಂಬ ಸಲಹೆ ನೀಡಿದೆ. 
ಜು.31 ಕ್ಕೆ ಎನ್ ಆರ್ ಸಿ ಪ್ರಕ್ರಿಯೆ ಮುಕ್ತಾಯಗೊಳಿಸಲು ಗಡುವು ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಡುವು ಮೀರಬಾರದೆಂಬ ಕಾರಣಕ್ಕಾಗಿ ಆತುರದಲ್ಲಿ ಪ್ರಕ್ರಿಯೆಗಳಿಗೆ ಕತ್ತರಿ ಬೇಡ ಎಂದು ಸುಪ್ರೀಂ ಹೇಳಿದೆ.
ಎನ್ ಆರ್ ಸಿ ಗೆ ಸಂಬಂಧಪಟ್ಟ ಅಧಿಕಾರಿಗಳು ದೂರು ಹಾಗೂ ಆಕ್ಷೇಪಣೆಗಳನ್ನು ನಿರ್ವಹಿಸುತ್ತಿರುವುದರ ಬಗ್ಗೆ ಮಾಧ್ಯಮದ ವರದಿಗಳು ಬಂದಿವೆ. ಮಾಧ್ಯಮಗಳು ಯಾವಾಗಲೂ ತಪ್ಪಾಗಿರುವುದಿಲ್ಲ. ಕೆಲವೊಮ್ಮೆ ಸರಿಯಾಗಿಯೂ ಇರುತ್ತವೆ.  ಪ್ರಕ್ರಿಯೆಗಳಲ್ಲಿ ದೋಷ ಬಾರದಂತೆ ಎಚ್ಚರ ವಹಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಸ್ಸಾಂ ನ ಮಾಜಿ ಯೋಧ ಮೊಹಮ್ಮದ್ ಸನಾವುಲ್ಲಾ ಅವರ ಹೆಸರು ಎನ್ ಆರ್ ಸಿ ಪಟ್ಟಿಯಿಂದ ಬಿಟ್ಟು ಹೋಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಎನ್ ಆರ್ ಸಿ ಸಂಯೋಜಕರನ್ನು ಪ್ರಶ್ನಿಸಿದ್ದು, ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. 
ಒಂದು ವೇಳೆ ಎನ್ ಆರ್ ಸಿಯಲ್ಲಿ ಅಚಾನಕ್ಕಾಗಿ ಹೆಸರು ಬಿಟ್ಟು ಹೋಗಿದ್ದರೆ ಅದನ್ನು ಸೇರಿಸುವುದಕ್ಕೆ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com