ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ 8 ಸಾವಿರ ಪ್ರತಿನಿಧಿಗಳು

ಇಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದೇಶ-ವಿದೇಶಗಳ ನಾಯಕರು, ಉದ್ಯಮಿಗಳು, ನಟರು ಕ್ರೀಡಾಪಟುಗಳು ಸೇರಿದಂತೆ ಎಂಟು ಸಾವಿರಕ್ಕೂ ಹೆಚ್ಚು
ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ 8 ಸಾವಿರ ಪ್ರತಿನಿಧಿಗಳು
ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ 8 ಸಾವಿರ ಪ್ರತಿನಿಧಿಗಳು
Updated on
ನವದೆಹಲಿ: ಇಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದೇಶ-ವಿದೇಶಗಳ ನಾಯಕರು, ಉದ್ಯಮಿಗಳು, ನಟರು ಕ್ರೀಡಾಪಟುಗಳು ಸೇರಿದಂತೆ ಎಂಟು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. 
ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ, ಅದಾನಿ ರತನ್ ಟಾಟಾ, ಬಾಲಿವುಟ್ ನಟ ಶಾರೂಖ್‌ ಖಾನ್ ಮೊದಲಾವದವರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.  
ಕನ್ನಡಿಗ ಸ್ಪಿನ್‌ ದಂತಕತೆ ಅನಿಲ್ ಕುಬ್ಳೆ ಹಾಗೂ ಇಂಡಿಯಾ ವಾಲ್‌ ಹಾಗೂ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್‌, ಒಲಿಪಿಂಕ್‌ ಪದಕ ವಿಜೇತೆ ಪಿ.ಟಿ ಉಷಾ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌, ಭಾರತ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್, ಹಿರಿಯ ಸ್ಪಿನ್ನರ್‌ ಹರಭಜನ್ ಸಿಂಗ್, ಬ್ಯಾಂಡ್ಮಿಂಟನ್‌ ಕೋಚ್‌ ಗೋಪಿಚಂದ್ ಸೇರಿದಂತೆ ಹಲವು ಕೀಡಾ ದಿಗ್ಗಜರು ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 
ರಾಷ್ಟ್ರಪತಿ ಭವನದ ಮುಂದೆ ಇಂದು ನಡೆಯುತ್ತಿರುವ ಪ್ರಮಾಣ ವಚನ ಸಮಾರಂಭ ಇದು ನಾಲ್ಕನೇ ಸಮಾರಂಭವಾಗಿದೆ. ಮೊದಲು ಚಂದ್ರ ಶೇಖರ್, ನಂತರ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಮೋದಿ ಅವರು ಎರಡನೇ ಬಾರಿ ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಪಠಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com