ಅಶ್ಲೀಲ ಜಾಹಿರಾತು ನೋಡಿ ಅಸಹ್ಯವಾಗುತ್ತಿದೆ: ಗ್ರಾಹಕನಿಗೆ ರೈಲ್ವೆ ಇಲಾಖೆ ಕೊಟ್ಟ ಸಲಹೆ ವೈರಲ್!

ನಿಮ್ಮ ವೈಬ್‍ಸೈಟ್ ನೋಡಿದರೆ ಬರೀ ಅಶ್ಲೀಲ ಜಾಹೀರಾತುಗಳೆ ಕಾಣಿಸುತ್ತಿವೆ. ನೋಡುವುದಕ್ಕೆ ಅಸಹ್ಯ ಹಾಗೂ ಮುಜುಗರವಾಗುತ್ತಿದ್ದು ಕೂಡಲೇ ಇದನ್ನು ಸರಿಪಡಿಸಿ ಎಂದು ಭಾರತೀಯ ರೈಲ್ವೆ ಇಲಾಖೆಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನಿಮ್ಮ ವೈಬ್‍ಸೈಟ್ ನೋಡಿದರೆ ಬರೀ ಅಶ್ಲೀಲ ಜಾಹೀರಾತುಗಳೆ ಕಾಣಿಸುತ್ತಿವೆ. ನೋಡುವುದಕ್ಕೆ ಅಸಹ್ಯ ಹಾಗೂ ಮುಜುಗರವಾಗುತ್ತಿದ್ದು ಕೂಡಲೇ ಇದನ್ನು ಸರಿಪಡಿಸಿ ಎಂದು ಭಾರತೀಯ ರೈಲ್ವೆ ಇಲಾಖೆಗೆ ಗ್ರಾಹಕನೊಬ್ಬ ಮಾಡಿದ್ದ ಟ್ವೀಟ್‌ಗೆ ರೈಲ್ವೆ ಇಲಾಖೆ ನೀಡಿದ ಉತ್ತರ ಇದೀಗ ಭಾರೀ ವೈರಲ್ ಆಗಿದೆ.
ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಆ್ಯಪ್ ನಲ್ಲಿ ನಿರಂತರವಾಗಿ ಅಶ್ಲೀಲ ಜಾಹಿರಾತುಗಳು ಬರುತ್ತಿವೆ ಎಂದು ಆನಂದ ಕುಮಾರ್ ಎಂಬುವರು ಐಆರ್‌ಸಿಟಿಸಿ ಕಚೇರಿ ಮತ್ತು ರೈಲ್ವೆ ಇಲಾಖೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ ಈ ಕಡೆ ಗಮನ ಹರಿಸಿ ಎಂದು ಟ್ವೀಟ್ ಮಾಡಿದ್ದ.
ಆನಂದ್ ಕುಮಾರ್ ಟ್ವೀಟ್ ಗೆ ಉತ್ತರಿಸಿರುವ ಭಾರತೀಯ ರೈಲ್ವೆ, ಐಆರ್‌ಸಿಟಿಸಿ ಜಾಹಿರಾತು ನೀಡಲು ಗೂಗಲ್ ಮತ್ತು ಎಡಿಎಕ್ಸ್ ಸರ್ವಿಂಗ್ ಟೂಲ್ ಅನ್ನು ಬಳಕೆ ಮಾಡುತ್ತದೆ. ಬಳಕೆದಾರರನ್ನು ಗುರಿಯಾಗಿಸುವ ಕುಕ್ಕೀಸ್ ಕೆಲಸ ಮಾಡುತ್ತದೆ. ಗ್ರಾಹಕನ ಬ್ರೌಸಿಂಗ್ ಮತ್ತು ಹಿಸ್ಟರಿ ಅನ್ನು ಗ್ರಹಿಸಿ ಜಾಹಿರಾತುಗಳನ್ನು ನೀಡುತ್ತದೆ. 
ನೀವು ಏನನ್ನು ಹೆಚ್ಚಾಗಿ ವೀಕ್ಷಿಸುತ್ತೀರೋ ಅವುಗಳನ್ನು ಆಧರಿಸಿ ನಿಮಗೆ ಜಾಹಿರಾತುಗಳು ಬರುತ್ತವೆ. ಹೀಗಾಗಿ ನೀವು ನಿಮ್ಮ ಬ್ರೌಸಿಂಗ್ ಹಿಸ್ಟರಿ ಮತ್ತು ಬ್ರೌಸರ್ ಕುಕ್ಕೀಸ್ ಕ್ಲೀನ್ ಮತ್ತು ಡಿಲೀಟ್ ಮಾಡಿ ಆ ನಂತರ ನಿಮಗೆ ಈ ರೀತಿಯ ಜಾಹಿರಾತುಗಳು ಬರುವುದಿಲ್ಲ ಎಂದು ಸಲಹೆ ನೀಡಿದೆ.
ಆನಂದ್ ಕುಮಾರ್ ಟ್ವೀಟ್ ಗೆ ರೈಲ್ವೆ ಇಲಾಖೆ ಮಾಡಿರುವ ಟ್ವೀಟ್ ವೈರಲ್ ಆಗಿದ್ದು ಚಪ್ಪಲಿ ಕೊಟ್ಟು ಹೊಡೆಸಿಕೊಂಡ ಅನುಭವ ಆನಂದ್ ಕುಮಾರ್ ಗೆ ಆಗಿದೆ ಎಂದು ಮೆಮ್ಸ್ ಮತ್ತು ಟ್ರೋಲ್ ಗಳು ಹರಿದಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com