ದೇಶ
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯ ದಹನ: ರಾಜ್ಯ ಸರ್ಕಾರಗಳಿಗೇ ಹೊಣೆಗಾರಿಕೆ-ಸುಪ್ರೀಂ ಕೋರ್ಟ್!
ಮಾಲಿನ್ಯದಿಂದಾಗಿ ಜನರು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ಮಾಲಿನ್ಯದಿಂದಾಗಿ ಜನರು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿ-ಎನ್ ಸಿಆರ್ ಭಾಗದಲ್ಲಿ ಮಾಲಿನ್ಯ ತಡೆಗಟ್ಟುವುದಕ್ಕೆ ವಿಫಲವಾಗಿರುವ ಅಧಿಕಾರಿಗಳ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನಾವು ಈ ರೀತಿಯ ವಾತಾವರಣದಲ್ಲಿ ಬದುಕುಳಿಯುವುದಕ್ಕೆ ಸಾಧ್ಯವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ಇನ್ನು ಅರ್ಧ ಗಂಟೆಯಲ್ಲಿ ಐಐಟಿಯೂ ಸೇರಿದಂತೆ
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯ ದಹನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪರಿಸರ ತಜ್ಞರನ್ನು ಕರೆಯುವಂತೆ ಸೂಚನೆ ನೀಡಿತು. ಇದೇ ವೇಳೆ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯ ದಹನ ಹಾಗೂ ಮಾಲಿನ್ಯಕ್ಕೆ ರಾಜ್ಯ ಸರ್ಕಾರಗಳನ್ನೇ ಹೊಣೆ ಮಾಡುವುದಾಗಿ ಕೋರ್ಟ್ ಎಚ್ಚರಿಸಿದೆ.


