ಇಂಡಿಯಾ ಗೇಟ್ ಬಳಿ ನೇತಾಜಿ ಪ್ರತಿಮೆ ನಿರ್ಮಿಸಿ: ಚಂದ್ರಕುಮಾರ್ ಬೋಸ್

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ನಿರ್ಮಿಸಬೇಕು ಎಂದು ನೇತಾಜಿ ಸೋದರ ಸಂಬಂಧಿ ಹಾಗೂ ಬಿಜೆಪಿ ನಾಯಕ ಚಂದ್ರ ಕುಮಾರ್ ಬೋಸ್ ಆಗ್ರಹಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ನಿರ್ಮಿಸಬೇಕು ಎಂದು ನೇತಾಜಿ ಸೋದರ ಸಂಬಂಧಿ ಹಾಗೂ ಬಿಜೆಪಿ ನಾಯಕ ಚಂದ್ರ ಕುಮಾರ್ ಬೋಸ್ ಆಗ್ರಹಿಸಿದ್ದಾರೆ.

ಇಂಡಿಯಾ ಗೇಟ್ ನಲ್ಲಿ ನೇತಾಜಿ ಪ್ರತಿಮೆ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪತ್ ನಲ್ಲಿ ಐಎನ್ ಎ ಸ್ಮಾರಕ ನಿರ್ಮಿಸಬೇಕು ಎಂದು  ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪಿಎಂಒ ಗೆ ಟ್ಯಾಗ್ ಮಾಡಿದ್ದಾರೆ.

ಜನವರಿ 23, 1897 ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದ ನೇತಾಜಿ ಸುಭಾಸ್ ಚಂದ್ರ ಬೋಸ್ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡನೆಯ ಮಹಾಯುದ್ಧದ ಆರಂಭದಲ್ಲಿ, 200 ವರ್ಷಗಳ ಹಳೆಯ ಬ್ರಿಟಿಷ್ ಆಡಳಿತದ ಹಿಡಿತದಿಂದ ಭಾರತವನ್ನು ಮುಕ್ತಗೊಳಿಸುವ ಪ್ರಯತ್ನದಲ್ಲಿ ಅವರು ತಮ್ಮ ನಾಯಕತ್ವದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಅಥವಾ ಆಜಾದ್ ಹಿಂದ್ ಫೌಜ್ ಅನ್ನು ಪುನರುಜ್ಜೀವನಗೊಳಿಸಿದರು.

ನೇತಾಜಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಬಂಗಾಳ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಅವರು ವ್ಯಾಪಕವಾಗಿ ವಿದೇಶ ಪ್ರವಾಸ ಕೈಗೊಂಡರು, ಆಗ ಸೋವಿಯತ್ ಒಕ್ಕೂಟ, ಜರ್ಮನಿ ಮತ್ತು ರಷ್ಯಾಕ್ಕೆ ಭೇಟಿ ನೀಡಿದರು ಮತ್ತು ಭಾರತದಲ್ಲಿ ಬ್ರಿಟಿಷ್ ಸರ್ಕಾರದ ಮೇಲೆ ದಾಳಿ ಮಾಡಲು ಪ್ರತಿಯೊಬ್ಬರ ಜೊತೆ ಮೈತ್ರಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com