ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ- ಮೀಲಾದುನ್ನಬಿ (ಈದ್ ಮಿಲಾದ್) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮುಸಲ್ಮಾನ ಬಾಂಧವರಿಗೆ ಶುಭ ಕೋರಿದ್ದಾರೆ.
ಮೀಲಾದುನ್ನಬಿಯ ಶುಭಾಶಯಗಳು. ಪ್ರವಾದಿ ಮೊಹಮ್ಮದ್ ಅವರ ಚಿಂತನೆಗಳಿಂದ ಪ್ರೇರಿತರಾಗಿ, ಈ ದಿನ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯ ಮನೋಭಾವ ಮತ್ತಷ್ಟು ಹೆಚ್ಚಿಸಲಿ ಎಂದು ಟ್ವೀಟ್ ಮಾಡಿದ್ದಾರೆ. "ಎಲ್ಲೆಡೆ ಶಾಂತಿ ಇರಲಿ " ಎಂದು ಪ್ರಧಾನಿ ಕೋರಿದ್ದಾರೆ.
Advertisement