ಶಬರಿಮಲೆ ಕುರಿತ ಸುಪ್ರೀಂ ತೀರ್ಪಿಗೆ ಅಯೋಧ್ಯೆಯ ತೀರ್ಪಿನ ಮಾದರಿ ಬದ್ಧರಾಗಿರಿ ಬಿಜೆಪಿಗೆ ಸಲಹೆ  

ಶಬರಿಮಲೆಗೆ ವಾರ್ಷಿಕ ಯಾತ್ರೆಯ ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ಕೇರಳದಲ್ಲಿ ರಾಜಕೀಯ ನಾಯಕರ ನಡುವಿನ ವಾಕ್ಸಮರ, ಸಲಹೆಗಳು ಪ್ರಾರಂಭವಾಗಿವೆ.  
ಶಬರಿಮಲೆ ಕುರಿತ ಸುಪ್ರೀಂ ತೀರ್ಪಿಗೆ ಅಯೋಧ್ಯೆಯ ತೀರ್ಪಿನ ಮಾದರಿ ಬದ್ಧರಾಗಿರಿ ಬಿಜೆಪಿಗೆ ಸಲಹೆ
ಶಬರಿಮಲೆ ಕುರಿತ ಸುಪ್ರೀಂ ತೀರ್ಪಿಗೆ ಅಯೋಧ್ಯೆಯ ತೀರ್ಪಿನ ಮಾದರಿ ಬದ್ಧರಾಗಿರಿ ಬಿಜೆಪಿಗೆ ಸಲಹೆ
Updated on

ತಿರುವನಂತಪುರಂ: ಶಬರಿಮಲೆಗೆ ವಾರ್ಷಿಕ ಯಾತ್ರೆಯ ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ಕೇರಳದಲ್ಲಿ ರಾಜಕೀಯ ನಾಯಕರ ನಡುವಿನ ವಾಕ್ಸಮರ, ಸಲಹೆಗಳು ಪ್ರಾರಂಭವಾಗಿವೆ.  ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಯುವತಿಯರು- ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಬಿಜೆಪಿಗೆ ಸಲಹೆ ನೀಡಿದ್ದಾರೆ. 

ಬಿಜೆಪಿ ಶಾಸಕ ಒ ರಾಜಗೋಪಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸುರೇಂದ್ರನ್, ಕಳೆದ ಬಾರಿ ಶಬರಿಮಲೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಗೂಂಡಾಗಳು, ಸಮಾಜಘಾತುಕರನ್ನು ಶಬರಿಮಲೆಗೆ ಕಳಿಸಿದಂತೆ ಈ ಬಾರಿ ಮಾಡಬಾರದು ಎಂದು ಬಿಜೆಪಿಗೆ ಹೇಳಿದ್ದಾರೆ. 

ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ವಾರ್ಷಿಕ ಯಾತ್ರೆಗೆ ತೆರಳುವವರಿಗೆ ಕಲ್ಪಿಸಲಾಗುವ ಸೌಲಭ್ಯಗಳ ಕುರಿತು ರಾಜಗೋಪಾಲ್ ಸುರೇಂದ್ರನ್ ಅವರಿಂದ ಮಾಹಿತಿ ಕೇಳಿದ್ದರು. ಈ ವೇಳೆ ಕಳೆದ ಬಾರಿ ಕೇರಳ ಸರ್ಕಾರದ ಬೆಂಬಲದಿಂದ ನಾಸ್ತಿಕರು, ಎಡಪಂಥೀಯ ಕಾರ್ಯಕರ್ತರು ಹಾಗೂ ಇತರರು ದೇವಾಲಯ ಪ್ರವೇಶಿಸಿದ್ದರು ಎಂದು ರಾಜಗೋಪಾಲ್ ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ವಿರುದ್ಧ ಆರೋಪ ಮಾಡಿದ ಸುರೇಂದ್ರನ್, ಕಳೆದ ಬಾರಿ ನೀವು ಸಮಾಜಘಾತುಕರು ಗೂಂಡಾಗಳನ್ನು ಉತ್ತೇಜಿಸಿದಂತೆ ಈ ಬಾರಿ ಮಾಡಬೇಡಿ, ಅಯೋಧ್ಯೆ ತೀರ್ಪನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಿದ್ದೀರಿ, ಶಬರಿಮಲೆ ವಿಷಯದಲ್ಲಿನ ಕೋರ್ಟ್ ತೀರ್ಪನ್ನೂ ಇದೇ ರೀತಿ ಸ್ವಾಗತಿಸಿ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com