ಬೀಳುತ್ತಿದ್ದ ಧ್ವಜಕಂಬದಿಂದ ಪಾರಾಗಲು ಹೋಗಿ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಮಹಿಳೆ!

ಸ್ಕೂಟಿಯಲ್ಲಿ ಮಹಿಳೆಯೊಬ್ಬಳು ತೆರಳುತ್ತಿದ್ದಾಗ ಎಐಎಡಿಎಂಕೆ ಪಕ್ಷದ ಧ್ವಜಸ್ಥಂಭವೊಂದು ತನ್ನ ಮೇಲೆ ಬೀಳುತ್ತಿರುವುದುಅನ್ನು ತಪ್ಪಿಸಲು ಹೋಗಿ ಲಾರಿಯೊಂದು ಗುದ್ದಿದ ಪರಿಣಾಮ ಎರಡೂ ಕಾಲುಗಳಿಗೂ ಗಂಭೀರ ಗಾಯಗಳಾಗಿರುವ ಘತನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಗಾಯಾಳು ಅನುರಾಧಾ
ಗಾಯಾಳು ಅನುರಾಧಾ
Updated on

ಕೊಯಮತ್ತೂರ್: ಸ್ಕೂಟಿಯಲ್ಲಿ ಮಹಿಳೆಯೊಬ್ಬಳು ತೆರಳುತ್ತಿದ್ದಾಗ ಎಐಎಡಿಎಂಕೆ ಪಕ್ಷದ ಧ್ವಜಸ್ಥಂಭವೊಂದು ತನ್ನ ಮೇಲೆ ಬೀಳುತ್ತಿರುವುದನ್ನು ತಪ್ಪಿಸಲು ಹೋಗಿ ಲಾರಿಯೊಂದು ಗುದ್ದಿದ ಪರಿಣಾಮ ಎರಡೂ ಕಾಲುಗಳಿಗೂ ಗಂಭೀರ ಗಾಯಗಳಾಗಿರುವ ಘತನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಚಿನ್ನಿಪಾಳಯಂನಲ್ಲಿನ ಖಾಸಗಿ ಹೋಟೆಲ್ ಉದ್ಯೋಗಿಯಾಗಿದ್ದ ಸಿಂಗಾನಲ್ಲೂರು ನಿವಾಸಿ ಅನುರಾಧಾ (30) ಹೀಗೆ ಗಾಯಗೊಂಡ ಮಹಿಳೆ. ಸೋಮವಾರ ಬೆಳಿಗ್ಗೆ, ಎಂದಿನಂತೆ ಅನುರಾಧಾ ಕೆಲಸಕ್ಕೆಂದು ಮನೆ ಬಿಟ್ಟಿದ್ದಾರೆ. ಆ ವೇಳೆ ಅವಿನಾಶಿ ರಸ್ತೆಯಲ್ಲಿನ ಗೋಲ್ಡ್ ವಿನ್ ಸಮೀಪ ರಾಜಕೀಯ ಪಕ್ಷದ ಧ್ವಜಸ್ಥಂಭ ಬೀಳುತ್ತಿರುವುದನ್ನು ಗಮನಿಸಿದ್ದಾಳೆ. ಈ ಅವಘಡದಿಂದ ಪಾರಾಗಲು ಸ್ಕೂಟಿಯನ್ನು ನಿಲ್ಲಿಸಿದ್ದಾಳೆ ಆಗ ಅನುರಾಧಾ ಸ್ಕೂಟಿಗೆ ಲಾರಿಯು ಗುದ್ದಿದ್ದು ಆಕೆಯ ಕಾಲಿನ ಮೇಲೆ ಲಾರಿ ಹರಿದು ಹೋಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.

ಲಾರಿ ಚಾಲಕನ ಅಜಾಗರೂಕತೆ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಅದೇ ವೇಳೆ ಸಿಟಿ ಟ್ರಾಫಿಕ್ ಇನ್ವೆಸ್ಟಿಗೇಷನ್ ವಿಂಗ್ (ಟಿಐಡಬ್ಲ್ಯು) ಲಾರಿಯನ್ನು ವಶಪಡಿಸಿಕೊಂದ್ದು ತನಿಖೆ ಕೈಗೊಂಡಿದೆ.

"ಪಕ್ಷದ ನಾಯಕನನ್ನು ಸ್ವಾಗತಿಸಲು ಗತಿಸಲು ರಾಜಕೀಯ ಪಕ್ಷವು ತಾತ್ಕಾಲಿಕ ಧ್ವಜ ಕಂಬಗಳನ್ನು ರಸ್ತೆಯ ಉದ್ದಕ್ಕೂ ಸ್ಥಾಪಿಸಿತ್ತು. ಅನುರಾಧಾ ಪ್ರಯಾಣಿಸುತ್ತಿದ್ದಾಗ ಒಂದು ಕಂಬ ಬೀಳುವುದರಲ್ಲಿತ್ತು. ಅದನ್ನು ತಪ್ಪಿಸಲು ಹೋದಾಗ ಆಕೆ ಸ್ಕೂಟಿಯನ್ನು ನಿಲ್ಲಿಸಿದ್ದಾಳೆ.  ಆ ಸಮಯದಲ್ಲಿಯೇ ಲಾರಿ ಆಕೆಗೆ ಗುದ್ದಿದೆ.ಆಕೆಯ ಒಂದು ಕಾಲು ಮುರಿದಿದ್ದು ಇನ್ನೊಂದು ತೊಡೆಯ ನರಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ ”ಎಂದು ಸಂಬಂಧಿಕರಾದ ಆರ್ ಶಿವನ್ ವಿವರಿಸಿದ್ದಾರೆ.

ಅಪಘಾತದ ನಂತರ ಪೊಲೀಸರು ತಕ್ಷಣವೇ ಕೆಲವು ಕಂಬಗಳನ್ನು ಸ್ಥಳದಿಂದ ತೆಗೆದುಹಾಕಿದ್ದಾರೆ. "ಹೆಚ್ಚಿನ ವಿವಾದವನ್ನು ತಪ್ಪಿಸಲು ಪೋಲೀಸರು ಇದನ್ನು ಸಾಮಾನ್ಯ ಅಪಘಾತವೆಂಬಂತೆ ಬಿಂಬಿಸುತ್ತಿದ್ದಾರೆ. ರು. ಅಪಘಾತದ ಹಿಂದಿನ ಕಾರಣವನ್ನು ಬಹಿರಂಗಪಡಿಸದಂತೆ ಅವರು ನಮಗೆ ಸೂಚನೆ ನೀಡಿದ್ದಾರೆ" ಅವರು ಹೇಳಿದರು.

ಟ್ರಾಫಿಕ್ ಇನ್ವೆಸ್ಟಿಗೇಷನ್ ವಿಂಗ್ ಅಧಿಕಾರಿ  ಆರ್ ಗೀತಾ ಈ ಆರೋಪಗಳನ್ನು ನಿರಾಕರಿಸಿದರು ಮತ್ತು ರಾಜಕೀಯ ಪಕ್ಷಗಳು ಧ್ವಜ ಕಂಬಗಳನ್ನು ಹಾಕಿದ್ದರಿಂದ ಈ ಅಪಘಾತವಾಗಿಲ್ಲಎಂದು ಹೇಳಿದರು. "ನಾವು ಅದನ್ನು ತನಿಖೆ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು. ಅನುರಾಧಾ ತನ್ನ ಹೆತ್ತವರು ಮತ್ತು ಎಂಟು ವರ್ಷದ ಮಗನೊಂದಿಗೆ ಸಿಂಗಾನಲ್ಲೂರಿನಲ್ಲಿ ವಾಸವಿದ್ದಾರೆ..

ಕಳೆದ ಸೆಪ್ಟೆಂಬರ್ ನಲ್ಲಿ ಸಹ ಇಂತಹದೇ ಒಂದು ಅಪಘಾತ ನಡೆದಿದ್ದು ಟೆಕ್ಕಿ ಶುಭಶ್ರೀ ಮೇಲೆ ರಾಜಕೀಯ ಪಕ್ಷದ ನಾಯಕರೊಬ್ಬರ ಬ್ಯಾನರ್ ಬಿದ್ದು ಆಕೆ ಸಾವನ್ನಪ್ಪಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com