ಶಬರಿಮಲೆ ಮಂಡಲ ಪೂಜೆ ಇಂದು ಆರಂಭ: ಗೊಂದಲ, ಆತಂಕದಲ್ಲಿ ಅಯ್ಯಪ್ಪ ಭಕ್ತರು 

ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪು ನಂತರ ಕೆಲ ಮಹಿಳಾ ಕಾರ್ಯಕರ್ತರು ದೇವಾಲಯ ಪ್ರವೇಶಿಸಿ ತೀವ್ರ ಗಲಾಟೆ, ಪ್ರತಿಭಟನೆಯಾಗಿದ್ದು ಈ ವರ್ಷ ನ್ಯಾಯಾಲಯ ತೀರ್ಪಿನ ಯಥಾಸ್ಥಿತಿ ಕಾಯ್ದುಕೊಂಡಿದೆ. 
ತೆಲಂಗಾಣದಿಂದ ಆಗಮಿಸಿದ ಅಯ್ಯಪ್ಪ ಭಕ್ತರ ಮೊದಲ ತಂಡ
ತೆಲಂಗಾಣದಿಂದ ಆಗಮಿಸಿದ ಅಯ್ಯಪ್ಪ ಭಕ್ತರ ಮೊದಲ ತಂಡ
Updated on

ಶಬರಿಮಲೆ: ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪು ನಂತರ ಕೆಲ ಮಹಿಳಾ ಕಾರ್ಯಕರ್ತರು ದೇವಾಲಯ ಪ್ರವೇಶಿಸಿ ತೀವ್ರ ಗಲಾಟೆ, ಪ್ರತಿಭಟನೆಯಾಗಿದ್ದು ಈ ವರ್ಷ ನ್ಯಾಯಾಲಯ ತೀರ್ಪಿನ ಯಥಾಸ್ಥಿತಿ ಕಾಯ್ದುಕೊಂಡಿದೆ. ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದು ಈ ಮಧ್ಯೆ ವಾರ್ಷಿಕ ಶಬರಿಮಲೆ ಯಾತ್ರಾ ಅವಧಿ ಶನಿವಾರ ಆರಂಭವಾಗುತ್ತಿದೆ.


ಶಬರಿಮಲೆ ಯಾತ್ರೆಗೆ ಹೋಗುವ ಭಕ್ತರಲ್ಲಿ ಪುನರ್ ಪರಿಶೀಲನಾ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಇನ್ನೂ ಗೊಂದಲವಿದೆ. ಶಬರಿಮಲೆ ಬೆಟ್ಟಕ್ಕೆ ಹೋಗುವ ಮಧ್ಯೆ, ನಿಲಕ್ಕಲ್ ನಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಯಾತ್ರಿಕರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.


ಶಬರಿಮಲೆಗೆ ಹೋಗುವ ರಸ್ತೆ ದುರಸ್ತಿ ಮತ್ತು ನಿರ್ವಹಣೆ ಕಾರ್ಯದಲ್ಲಿ ವಿಳಂಬ ಲೋಕೋಪಯೋಗಿ ಇಲಾಖೆಯ ಮತ್ತೊಂದು ಲೋಪದೋಷವಾಗಿದೆ. ಪಂಪವರೆಗೆ ಆಂಧ್ರ ಪ್ರದೇಶ, ತಮಿಳು ನಾಡು, ಕರ್ನಾಟಕ ಮತ್ತು ತೆಲಂಗಾಣದಿಂದ ಹೋಗುವ ಯಾತ್ರಿಕರಿಗೆ ವಾಹನಗಳನ್ನು ಬಿಡದಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದಾಗ ಮಂಡಲ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಯಾತ್ರಿಕರು ಬರುವುದರಿಂದ ಗೊಂದಲ, ನೂಕುನುಗ್ಗಲು ಉಂಟಾಗುತ್ತದೆ. ಪಂಡಲಮ್ ಮತ್ತು ಎರುಮೆಲಿಯಲ್ಲಿನ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.


ಇಂದು ಸಂಜೆ 5 ಗಂಟೆಗೆ ದೇವಾಲಯ ಮುಕ್ತ: ಶಬರಿಮಲೆಯ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯ ಇಂದು ಸಂಜೆ 5 ಗಂಟೆಗೆ ತೆರೆಯಲಿದ್ದು 41 ದಿನಗಳ ಮಂಡಲ ಪೂಜೆ ಋತು ಆರಂಭವಾಗಲಿದೆ. ಅರ್ಚಕ ಮೆಲ್ಸಂತಿ ವಾಸುದೇವನ್ ನಂಪೂದರಿ ದೇವಾಲಯದ ಶ್ರೀಕೋವಿಲ್ ನ್ನು ಮಹೇಶ್ ಮೊಹನರು ತಂತ್ರಿಗಳ ಸಮ್ಮುಖದಲ್ಲಿ ತೆರೆಯಲಿದ್ದಾರೆ.


ಸಂಪ್ರದಾಯದ ಪ್ರಕಾರ ಶ್ರೀಕೋವಿಲ್ ನಲ್ಲಿ ಇಂದು ಸಂಜೆ ಯಾವುದೇ ಸಂಪ್ರದಾಯಗಳು ನಡೆಯುವುದಿಲ್ಲ. ಹೊಸ ಮೆಲ್ಸಂತಿಯ ಕಳಶಾಭಿಷೇಕ ಇಂದು ಸಂಜೆ ನೆರವೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com