ಅಜಿತ್ ಪವಾರ್ ಮತ್ತು ಬೆಂಬಲಿಗರ ಮೇಲೆ ಅನರ್ಹತೆ ತೂಗುಗತ್ತಿ ?

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಸುಮಾರು ಒಂದು ತಿಂಗಳ ನಂತರ,ಎನ್ ಸಿಪಿ-ಬಿಜೆಪಿ ಸೇರಿ ಸರ್ಕಾರ ರಚಿಸಿವೆ.
ಅಜಿತ್ ಪವಾರ್
ಅಜಿತ್ ಪವಾರ್
Updated on

ನವದೆಹಲಿ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಸುಮಾರು ಒಂದು ತಿಂಗಳ ನಂತರ,ಎನ್ ಸಿಪಿ-ಬಿಜೆಪಿ ಸೇರಿ ಸರ್ಕಾರ ರಚಿಸಿವೆ.

ಶನಿವಾರ ಬೆಳಿಗ್ಗೆ ಭಾರತೀಯ ಜನತಾ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ರಾಜಕಿಯ ಸ್ಥಿತಿ ಮಾತ್ರ ಬಹಳ ಹೆಪ್ಪುಗಟ್ಟಿದೆ.

ರಾಜಕೀಯ ಬೆಳವಣಿಗಳು ರೋಚಕ ತಿರುವು ಪಡೆಯುತ್ತಿವೆ. ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹತೆಯ ಬೆದರಿಕೆಯನ್ನು ಎದುರಿಸಲು ಅಜಿತ್ ಪವಾರ್ ಮತ್ತು ಅವರ ಬೆಂಬಲಿಗರು ಸಿದ್ದರಾಗಲಿದ್ದಾರೆಯೇ? ಎಂಬ ಪ್ರಶ್ನೆಯೂ ಕಾಡುತ್ತಿದ್ದು ಇದರ ಮೇಲೆಯೇ ಸರಕಾರದ ಉಳಿವು ಅಳಿವು ಅವಲಂಬಿತವಾಗಲಿದೆ.

ಬಹುಮತ ಸಾಬೀತು ಪಡಿಸಲು ವಿಧಾನಸಭೆ ಅಧಿವೇಶನ ಕರೆಯಬೇಕಾಗುತ್ತದೆ. ನೂತನವಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಲಿದೆ. ಈ ಕಾಯ್ದೆಯನ್ನು ಪ್ರಯೋಗಿಸಬೇಕೇ? ಅಥವಾ 2/3 ಭಾಗದಷ್ಟು ಶಾಸಕರು ಪಕ್ಷವೊಂದರಿಂದ ಹೊರಬಂದಿಲ್ಲ ಎಂಬ ಅಂಶವನ್ನು ಪರಿಗಣಿಸಬೇಕೇ? ಎಂಬುದನ್ನು ವಿಧಾನಸಭಾಪತಿ ನಿರ್ಧರಿಸಲಿದ್ದಾರೆ. 

ಆದರೆ ಸ್ಪೀಕರ್ ನಿರ್ಣಯವನ್ನು ಪ್ರಶ್ನಿಸುವ ಎಲ್ಲಾ ಅವಕಾಶಗಳಿವೆ ಎಂದು ಕರ್ನಾಟಕದ ಇತ್ತೀಚಿನ ಪ್ರಸಂಗ ತೋರಿಸಿಕೊಟ್ಟಿದೆ. ಇದಕ್ಕೂ ಮುನ್ನ ಎನ್ಸಿಪಿ ವಿಪಕ್ಷ ನಾಯಕನ ಆಯ್ಕೆಯಾಗಬೇಕಾಗುತ್ತದೆ. ಅಜಿತ್ ಪವಾರ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಯುವಂತೆ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಶರದ್ ಪವಾರ್ ಸೂಚಿಸಿದ್ದಾರೆ. ಎನ್ಸಿಪಿ ಅಧಿಕೃತವಾಗಿ ಕಾಯ್ದೆ ಉಲ್ಲಂಘನೆಯಾಗಿದೆ ಕ್ರಮ ಜರುಗಿಸಿ ಎಂದು ಸ್ಪೀಕರ್ ಗೆ ದೂರು ನೀಡಬೇಕಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com