ಜೆ ಎನ್ ಯು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಶಿಕ್ಷಣ ಸಚಿವ ನೂರುಲ್ ಹಸನ್ ಕನಸಿನ ಕೂಸು; ಆರ್ ಎಸ್ಎಸ್ ಮುಖಂಡ

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ-ಜೆಎನ್ ಯು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಹಾಗೂ ಅವರ ಸಂಪುಟದ ಕಟ್ಟಾ ಎಡಪಂಥೀಯವಾದಿ ಶಿಕ್ಷಣ ಸಚಿವ ನೂರುಲ್ ಹಸನ್ ಕನಸಿನ ಕೂಸು ಎಂದು ಹಿರಿಯ ಆರ್ ಎಸ್ಎಸ್ ನಾಯಕ  ಹಾಗೂ ರಾಷ್ಟ್ರೀಯ ಪ್ರಜ್ಞಾ ಪ್ರವಾಹ್ ಸಂಚಾಲಕ ಜೆ. ನಂದಕುಮಾರ್ ಹೇಳಿದ್ದಾರೆ.
ಜೆ ಎನ್ ಯು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಶಿಕ್ಷಣ ಸಚಿವ ನೂರುಲ್ ಹಸನ್ ಕನಸಿನ ಕೂಸು; ಆರ್ ಎಸ್ಎಸ್ ಮುಖಂಡ
ಜೆ ಎನ್ ಯು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಶಿಕ್ಷಣ ಸಚಿವ ನೂರುಲ್ ಹಸನ್ ಕನಸಿನ ಕೂಸು; ಆರ್ ಎಸ್ಎಸ್ ಮುಖಂಡ
Updated on

ತಿರುವನಂತಪುರಂ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ-ಜೆಎನ್ ಯು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಹಾಗೂ ಅವರ ಸಂಪುಟದ ಕಟ್ಟಾ ಎಡಪಂಥೀಯವಾದಿ ಶಿಕ್ಷಣ ಸಚಿವ ನೂರುಲ್ ಹಸನ್ ಕನಸಿನ ಕೂಸು ಎಂದು ಹಿರಿಯ ಆರ್ ಎಸ್ಎಸ್ ನಾಯಕ  ಹಾಗೂ ರಾಷ್ಟ್ರೀಯ ಪ್ರಜ್ಞಾ ಪ್ರವಾಹ್ ಸಂಚಾಲಕ ಜೆ. ನಂದಕುಮಾರ್ ಹೇಳಿದ್ದಾರೆ.

ಜೆಎನ್ ಯು ಇಂದಿರಾ ಗಾಂಧಿ ಮತ್ತು ಅವರ ಮಂತ್ರಿ ಮಂಡಲದ ಶಿಕ್ಷಣ ಸಚಿವ ನೂರುಲ್ ಹಸನ್ ಅವರ ಮೆದುಳಿನ ಕೂಸು, ಬ್ರಿಟನ್ ನ ಹೇಲ್ಸ್ ಬರಿ ಕಾಲೇಜಿನ ಮಾದರಿಯಲ್ಲಿ ಎಡಪಂಥೀಯ ಆಲೋಚನೆಯ, ತಮಗೆ ಹೊಂದಿಕೆಯಾಗುವಂತಹ, ಬದ್ದವಾಗಿರುವಂತಹ  ಅಧಿಕಾರಿವರ್ಗ ರೂಪಿಸಲು, ತರಬೇತಿ ನೀಡಲು ಈ ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಕೇರಳ ಮೂಲದ ಆರ್ ಎಸ್ಎಸ್ ನಾಯಕ ಯುಎನ್ಐನೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು  ಬೆಂಬಲಿಸಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದೊಂದಿಗೆ ಇಂದಿರಾ ಗಾಂಧಿ ಮಾಡಿಕೊಂಡಿದ್ದ ಒಪ್ಪಂದದ ಭಾಗವಾಗಿ ನೂರುಲ್ ಹಸನ್   ಅವರನ್ನು ತಮ್ಮಸಂಪುಟದಲ್ಲಿ ಶಿಕ್ಷಣ ಸಚಿವರನ್ನಾಗಿಸಿದ್ದರು ಎಂದು ದೂರಿದರು. 1966ರಲ್ಲಿಜವಹರಲಾಲ್ ನೆಹರೂ ವಿಶ್ವ ವಿದ್ಯಾಲಯ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಂಡಿತು. ನೆಹರೂ ಸಂಪುಟದಲ್ಲಿ ಮಾಜಿ ಶಿಕ್ಷಣ ಸಚಿವರಾಗಿದ್ದ ಎಂ.ಸಿ. ಛಾಗ್ಲಾ ವಿಧೇಯಕ ಮಂಡಿಸಿದ್ದರು. ಎಂಸಿ ಛಾಗ್ಲಾ ರಾಷ್ಟ್ರೀಯವಾದಿ ಮುಸ್ಲಿಂ ಎಂದೇ  ಹೆಸರಾಗಿದ್ದರು. ಅಂತಿಮ ವಾಗಿ ಜೆಎನ್ ಯು ಕಾಯ್ದೆ 1969ರಲ್ಲಿ  ಅಸ್ಥಿತ್ವಕ್ಕೆ ಬಂದಿತು  ಎಂದು ಅವರು  ವಿವರಿಸಿದರು.

ಶಿಕ್ಷಣ ಸಚಿವ ನೂರುಲ್ ಹಸನ್ ಕಟ್ಟಾ ಎಡಪಂಥೀಯರಾಗಿದ್ದರು.  ನೂರಲ್ ಹಸನ್ ಅವರ ನೀತಿಗಳು ಜೆಎನ್ ಯು ಬೋಧಕರಲ್ಲಿ  ಎಡಪಂಥೀಯ ಪ್ರಾಬಲ್ಯವನ್ನು ಖಾತ್ರಿಪಡಿಸಿದ್ದು, ವಿಶ್ವವಿದ್ಯಾಲಯ ಇನ್ನೂ ಅದರ ಛಾಯೆಯಿಂದ ಹೊರಬರಲು ಹೆಣಗಾಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ನೆಹರೂ, ಇಂದಿರಾಗಾಂಧಿ ಅವರ ನಿಯಂತ್ರಣದಲ್ಲಿ ಪ್ರಮುಖ ರಾಷ್ಟ್ರೀಯ ಮೌಲ್ಯಗಳನ್ನು ದುರ್ಬಲಗೊಳಿಸಿತು. ಪಕ್ಷ ಹಾಗೂ ಸರ್ಕಾರದಲ್ಲಿ ರಾಷ್ಟ್ರೀಯವಾದಿ ಮುಸ್ಲಿಮರ ಬದಲು ಎಡ ಪಂಥೀಯ ಮುಸ್ಲಿಮರಿಗೆ ಹೆಚ್ಚು ಸ್ಥಾನ ಮಾನ ಕಲ್ಪಿಸಲು ಆರಂಭಿಸಿತು ಎಂದು ಆರೋಪಿಸಿದರು. ಜೆಎನ್ ಯು ಬೋಧಕರ ಸಂಘಟನೆಯಿಂದ 113 ಜೆಎನ್ ಯು ಶಿಕ್ಷಕರು ದೂರ ಸರಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಂದಕುಮಾರ್, ಇಂತಹ ಶಿಕ್ಷಕರ ಸಂಖ್ಯೆ ಹಚ್ಚಳವಾಗಲಿ, ಜ್ಞಾನದ ಗರ್ಭಗುಡಿಯಿಂದ ಅನಪೇಕ್ಷಿತ ಶಕ್ತಿಗಳು ತೊಲಗಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com