ಉಗ್ರರಿಗೆ ಬೆಂಬಲ ಕೊಡುವುದನ್ನು ಮುಂದುವರಿಸಿದರೆ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ: ರಾಜನಾಥ್ ಸಿಂಗ್ 

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸದಿದ್ದರೆ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್ಎಟಿಎಫ್)ಯಿಂದ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು 26/11ರ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು 26/11ರ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
Updated on

ಮುಂಬೈ: ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸದಿದ್ದರೆ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್ಎಟಿಎಫ್)ಯಿಂದ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.


26/11 ಮುಂಬೈ ಭಯೋತ್ಪಾದಕ ದಾಳಿಯ 11ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಮೇಲೆ ಇನ್ನು ಮುಂದೆ ಸುಲಭವಾಗಿ ಗುರಿಯಾಗಿಟ್ಟುಕೊಂಡು ದಾಳಿ ಮಾಡಲು ಸಾಧ್ಯವಿಲ್ಲ. ಕಳೆದ ಐದೂವರೆ ವರ್ಷಗಳ ಆಡಳಿತದಲ್ಲಿ ನಮ್ಮ ಸರ್ಕಾರ ಭಾರತದಲ್ಲಿರುವ ಎಲ್ಲಾ ಉಗ್ರರ ಮೂಲಭೂತ ಸೌಕರ್ಯಗಳನ್ನು ನಾಶಪಡಿಸಿದ್ದು ಇನ್ನು ಮುಂದೆ ಎಫ್ಎಟಿಎಫ್ ನೆರವಿನೊಂದಿಗೆ ಎಲ್ಲಾ ಭಯೋತ್ಪಾದಕ ಹಣಕಾಸು ಸಂಪರ್ಕಜಾಲವನ್ನು ನಾಶಪಡಿಸಲು ಮುಂದಾಗಿದ್ದೇವೆ ಎಂದರು.


ಎಫ್ಎಟಿಎಫ್ ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರಿಸಿದ್ದು(grey list) ಇನ್ನು ಮುಂದೆ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ ಕಪ್ಪು ಪಟ್ಟಿಗೆ ಸೇರಿಸುವುದು ಖಂಡಿತ ಎಂದರು.


ಆರ್ಥಿಕ ಹಿಂಜರಿತ ಮತ್ತು ಹಣದುಬ್ಬರದಿಂದ ಬಳಲುತ್ತಿರುವ ಪಾಕಿಸ್ತಾನ ಭಯೋತ್ಪಾದನೆ ವಿಷಯದಲ್ಲಿ ಕಪ್ಪುಪಟ್ಟಿಗೆ ಸೇರುವುದೊಂದು ಬಾಕಿಯಿದೆಯಷ್ಟೆ ಎಂದು ಸಹ ಟೀಕಿಸಿದರು. 


ಗಡಿ ಭದ್ರತೆ ವಿಷಯದಲ್ಲಿ ಕಳೆದ 11 ವರ್ಷಗಳಲ್ಲಿ ಭಾರತ ಬಲಿಷ್ಟವಾಗಿದ್ದು ಹೀಗಾಗಿ ಯಾವ ಉಗ್ರಗಾಮಿ ಸಂಘಟನೆಗಳಿಗೂ ಕೂಡ ಮತ್ತೊಂದು 26/11ರ ದಾಳಿಯಂತಹ ದಾಳಿಯನ್ನು ನಡೆಸುವುದು ಕಷ್ಟವಿದೆ. ಕಳೆದ 5 ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಿಟ್ಟರೆ ಬೇರೆ ಯಾವ ಕಡೆಯೂ ಭಯೋತ್ಪಾದಕ ದಾಳಿ ನಡೆದಿಲ್ಲ ಎಂದು ಸ್ಮರಿಸಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com