ಅಚ್ಚರಿ ಉಂಟುಮಾಡಿದ ಅಮೃತಾ ಫಡ್ನವಿಸ್ ಟ್ವೀಟ್..!
ದೇಶ
ಅಚ್ಚರಿ ಉಂಟುಮಾಡಿದ ಅಮೃತ ಫಡ್ನವಿಸ್ ಟ್ವೀಟ್..!
ಮಹಾರಾಷ್ಟ್ರ 20 ವರ್ಷಗಳ ನಂತರ ಶಿವಸೇನೆ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದು ಉದ್ಧವ್ ಠಾಕ್ರೆ ಶಿವಸೇನೆ-ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ-ಕಾಂಗ್ರೆಸ್ ಮೈತ್ರಿ ಸರ್ಕಾರ ಮುನ್ನಡೆಸಲು ಸಜ್ಜಾಗಿದ್ದಾರೆ.
ಮುಂಬೈ: ಮಹಾರಾಷ್ಟ್ರ 20 ವರ್ಷಗಳ ನಂತರ ಶಿವಸೇನೆ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದು ಉದ್ಧವ್ ಠಾಕ್ರೆ ಶಿವಸೇನೆ-ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ-ಕಾಂಗ್ರೆಸ್ ಮೈತ್ರಿ ಸರ್ಕಾರ ಮುನ್ನಡೆಸಲು ಸಜ್ಜಾಗಿದ್ದಾರೆ.
ಈ ನಡುವೆ ಮತ್ತೆ ನಾವು ಜನರ ಪ್ರೀತಿಯಿಂದಲೇ ಮರಳಿ ಬರುತ್ತೇವೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವಿಸ್ ಅವರು ಉರ್ದು ಭಾಷೆಯಲ್ಲಿ ಟ್ವೀಟ್ ಮಾಡಿರುವುದು ಹಲವರ ಕಣ್ಣು ಹುಬ್ಬೇರುವಂತೆ ಮಾಡಿದೆ. ಧನ್ಯವಾದಗಳು, ನಿಮ್ಮ ವಾಹಿನಿ ಅತ್ತಿಗೆಗಾಗಿ ತೋರಿದ ವರ್ಷಗಳ ಕಾಲ ನೀವು ತೋರಿಸಿದ ಪ್ರೀತಿ ಯಾವಾಗಲೂ ಹಸಿರಾಗಿಯೇ ಇದೆ. ನಾವು ಮರಳಿ ಮತ್ತೆ ಬರುತ್ತೇವೆ ಅದೂ ಜನರ ಪ್ರೀತಿಯೊಂದಿಗೆ ಎಂದು ಹೇಳಿರುವುದೂ ರಾಜಕೀಯ ವಲಯದಲ್ಲಿ ಬಹಳ ಅಚ್ಚರಿ ಉಂಟು ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ