ಪ್ರಧಾನಿ ನರೇಂದ್ರಮೋದಿ
ದೇಶ
ವಿಜಯದಶಮಿ: ರಾವಣ ದಹನ ಮಾಡಿದ ಪ್ರಧಾನಿ ಮೋದಿ!
ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಸೆಕ್ಟರ್ 10 ರಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು, ರಾವಣನನ್ನು ದಹಿಸಿದರು.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಸೆಕ್ಟರ್ 10 ರಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು, ರಾವಣನನ್ನು ದಹಿಸಿದರು.
ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ಹಾಗೂ ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಿಲ್ಲು ಬಾಣಗಳು ಹಾಗೂ ಧಾರ್ಮಿಕ ಗ್ರಂಥ ರಾಮಚರಿತಮಾನಸವನ್ನು ಮೋದಿಗೆ ಕೊಡುಗೆಯಾಗಿ ನೀಡಲಾಯಿತು.ನಂತರ ಬಿಲ್ಲು ಬಾಣಗಳನ್ನು ಬಿಟ್ಟು ರಾವಣ ಪ್ರತಿಕೃತಿಯನ್ನು ದಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿ, ನಮ್ಮ ನೆಲದಲ್ಲಿ ತಾಯಿಯನ್ನು ಪೂಜೆಸಲಾಗುತ್ತದೆ. ದೇಶದ ಪ್ರತಿಯೊಬ್ಬ ಮಗಳನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನೆಲದ ಹೆಣ್ಣು ಮಕ್ಕಳು ಲಕ್ಷ್ಮಿ ಎಂದು ಮನ್ ಕೀ ಬಾತ್ ನಲ್ಲಿ ಹೇಳಿದ್ದೇನೆ. ಅವರೊಟ್ಟಿಗೆ ಮುಂಬರುವ ದೀಪಾವಳಿಯನ್ನು ನಾವೆಲ್ಲರೂ ಆಚರಿಸೋಣ ಎಂದರು.


