ಮೋದಿ-ಕ್ಸಿ ಭೇಟಿಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪವಾಗಿಲ್ಲ: ವಿದೇಶಾಂಗ ಕಾರ್ಯದರ್ಶಿ ಗೋಖಲೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವೆ ನಡೆದ ಮಾತುಕತೆಯ ಸಂದರ್ಭದಲ್ಲಿ ಕಾಶ್ಮೀರ ವಿಷಯದ ಬಗ್ಗೆ ಚರ್ಚೆಯಾಗಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಶನಿವಾರ ಹೇಳಿದ್ದಾರೆ.
ವಿಜಯ್ ಗೋಖಲೆ
ವಿಜಯ್ ಗೋಖಲೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವೆ ನಡೆದ ಮಾತುಕತೆಯ ಸಂದರ್ಭದಲ್ಲಿ ಕಾಶ್ಮೀರ ವಿಷಯದ ಬಗ್ಗೆ ಚರ್ಚೆಯಾಗಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಶನಿವಾರ ಹೇಳಿದ್ದಾರೆ. ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನಡೆದ ಎರಡನೇ ಮೋದಿ-ಕ್ಸಿ ಅನೌಪಚಾರಿಕ ಶೃಂಗಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ವಿದೇಶಾಂಗ ಕಾರ್ಯದರ್ಶಿಮಾತನಾಡಿದ್ದು  ಈ ಚರ್ಚೆಯಲ್ಲಿ ಎಲ್ಲಿಯೂ ಖಾಶ್ಮೀರ ವಿಷಯ ಪ್ರಸ್ತಾಪವಾಗಿಲ್ಲ ಎಂದು ಮತ್ತು ಅದೆಂದಿಗೂ ಭಾರತದ ಆಂತರಿಕ ವಿಚಾರ ಎಂದು ಅವರು ಹೇಳಿದರು.

ಆದರೆ, ಭಯೋತ್ಪಾದನೆಯ ಸವಾಲನ್ನು ಎದುರಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಮೋದಿ ಮತ್ತು ಕ್ಸಿ ಒಪ್ಪಿಕೊಂಡರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 ಸಂಕೀರ್ಣ ಜಗತ್ತಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಸವಾಲುಗಳನ್ನು ಎದುರಿಸುವುದು ಮುಖ್ಯ ಎಂದು ಎರಡೂ ನಾಯಕರು ಒಪ್ಪಿಕೊಂಡರು. ಎರಡೂ ದೇಶಗಳು ಜನಸಂಖ್ಯೆಯ ವಿಷಯದಲ್ಲಿ ಮಾತ್ರವಲ್ಲದೆ ವೈವಿಧ್ಯತೆಯ ದೃಷ್ಟಿಯಿಂದಲೂ ದೊಡ್ಡದಾದ  ರಾಷ್ಟ್ರಗಳಾಗಿದೆ. 

ಮುಂದಿನ  ಭಾರತ-ಚೀನಾ ಶೃಂಗಸಭೆಗೆ ಅಧ್ಯಕ್ಷ ಜಿನ್‌ಪಿಂಗ್ ಅವರು ಪ್ರಧಾನಿ ಮೋದಿಯವರನ್ನು ಚೀನಾಕ್ಕೆ ಆಹ್ವಾನಿಸಿದ್ದಾರೆ ಎಂದು ವಿಜಯ್ ಗೋಖಲೆ ಹೇಳಿದ್ದಾರೆ. "ಪಿಎಂ ಮೋದಿ ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ. ದಿನಾಂಕಗಳನ್ನು ನಂತರ ನಿಗದಿಪಡಿಸಲಾಗುತ್ತದೆ" ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವನ್ನು ಅನುಸರಿಸಿ ಬಿಕ್ಕಟ್ಟಿನ ಸೃಷ್ಟಿಯ ಕುರಿತು ಮರುಪರಿಶೀಲಿಸುವ ನಿಟ್ಟಿನಲ್ಲಿ ಉಭಯ ನಾಯಕರು ಯೋಜಿಸಿದ್ದಾರೆ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ವಿವೇಕಯುತವಾಗಿ ನಿರ್ವಹಿಸುತ್ತೇವೆ ಮತ್ತು ಅವುಗಳನ್ನು ವಿವಾದಗಳಾಗಲು ಅನುಮತಿಸುವುದಿಲ್ಲ ನಾವು ಪರಸ್ಪರರ ಕಾಳಜಿಗಳ ಬಗ್ಗೆ ಸೂಕ್ಷ್ಮವಾಗಿರುತ್ತೇವೆ ಮತ್ತು ನಮ್ಮ ಸಂಬಂಧಗಳು ಪ್ರಪಂಚದಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ಕಾರಣವಾಗುತ್ತವೆ.ಇವು ನಮಗೆ ಇನ್ನಷ್ಟು ದೊಡ್ಡ ಸಾಧನೆಗಳು ಮತ್ತು ಭವಿಷ್ಯದಲ್ಲಿ ಹೆಚ್ಚಿನದನ್ನು ಮಾಡಲು ಪ್ರೇರಣೆ ನೀಡಲಿದೆ ಎಂದು ನಾಯಕರು ಹೇಳಿದ್ದಾಗಿ ಗೋಖಲೆ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com