ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ಬಾಂಗ್ಲಾ ಉಗ್ರ ಸಂಘಟನೆಯ ಜಾಡು ಪತ್ತೆ, ಆರ್‌ಎಸ್‌ಎಸ್ ನಾಯಕರೇ ಟಾರ್ಗೆಟ್

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಹಲವು ನಗರಗಳಲ್ಲಿ ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಉಗ್ರ ಸಂಘಟನೆಯ ಜಾಡು ಪತ್ತೆಯಾಗಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಹಲವು ನಗರಗಳಲ್ಲಿ ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಉಗ್ರ ಸಂಘಟನೆಯ ಜಾಡು ಪತ್ತೆಯಾಗಿದ್ದು, 125ಕ್ಕೂ ಹೆಚ್ಚು ಶಂಕಿತ ಉಗ್ರರು ವಿವಿಧ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಮುಖ್ಯಸ್ಥ ವೈಸಿ ಮೋದಿ ಅವರು ತಿಳಿಸಿದ್ದಾರೆ.

ಇಂದು ದೆಹಲಿಯಲ್ಲಿ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ಗಳ ಮುಖ್ಯಸ್ಥರ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಕರ್ನಾಟಕ, ಕೇರಳ, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಜೆಎಂಬಿ ಚಟುವಟಿಕೆಗಳನ್ನು ಗುರುತಿಸಲಾಗಿದೆ. ಈ ರಾಜ್ಯಗಳ್ಲಿ ಬೀಡು ಬಿಟ್ಟಿರುವ 125 ಶಂಕಿತ ಉಗ್ರರು ಜೆಎಂಬಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಐಸಿಸ್ ಹಾಗೂ ಜೆಎಂಬಿ ಉಗ್ರರು ಬೀಡು ಬಿಟ್ಟಿದ್ದಾರೆ. ಕರ್ನಾಟಕ, ಕೇರಳದಲ್ಲಿ ಜೆಎಂಬಿ ಉಗ್ರರು ಸಕ್ರಿಯರಾಗಿದ್ದು,  ಆರ್‌ಎಸ್‌ಎಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಿದ್ದಾರೆ ಎಂದು ಎನ್‍ಐಎ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯ ರಾಜಧಾನಿಯಲ್ಲೇ ಉಗ್ರರ ಬಗ್ಗೆ ಮಾಹಿತಿ ಪತ್ತೆಯಾಗಿದ್ದು, 125 ಶಂಕಿತ ಉಗ್ರರ ಬಗ್ಗೆ ಎನ್‍ಐಎ ಮಾಹಿತಿ ಸಂಗ್ರಹಿಸಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ತನಿಖಾ ದಳ ಹೈಅಲರ್ಟ್ ನೀಡಿದ್ದು, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮುಖ್ಯಸ್ಥರ ಸಭೆಯಲ್ಲಿ ಎನ್‍ಐಎ ಮುಖ್ಯಸ್ಥ ಅಲೋಕ್ ಮಿತ್ತಲ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com