ಅಕ್ರಮವಾಗಿ ಧರ್ಮ ಬೋಧನೆ; 14 ವಿದೇಶಿಯರನ್ನು ಬಿಜ್ನೊರ್ ಜಿಲ್ಲೆ ತೊರೆಯಲು ಸೂಚನೆ

ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಿಜ್ನೊರ್: ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.


ಪ್ರವಾಸಿ ವೀಸಾದಲ್ಲಿರುವ ಈ ಪ್ರವಾಸಿಗರು ಬಿಜ್ನೊರ್ ನ ಮಸೀದಿಯಲ್ಲಿ ಭೋದಿಸುತ್ತಿದ್ದ ಧಾರ್ಮಿಕತೆ ಬಗ್ಗೆ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ. 


ಸ್ಥಳೀಯ ಗುಪ್ತಚರ ಘಟಕದಿಂದ ಪ್ರಕರಣ ಗಮನಕ್ಕೆ ಬಂದಿದ್ದು ನಿನ್ನೆ ಈ ಪ್ರಜೆಗಳಿಗೆ ಮಸೀದಿ ಬಿಟ್ಟು ತೊರೆದುಹೋಗುವಂತೆ ಸೂಚಿಸಲಾಗಿದೆ. ದೇಶದ ಬೇರೆ ಯಾವುದೇ ಭಾಗದಲ್ಲಿ ಇವರು ಧಾರ್ಮಕತೆಯನ್ನು ಭೋದಿಸುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಈ ವಿಚಾರವನ್ನು ಕೇಂದ್ರ ಗುಪ್ತಚರ ಇಲಾಖೆಗೆ ಕಳುಹಿಸಲಾಗಿದೆ. ಪ್ರವಾಸಿ ವೀಸಾ ಪ್ರಕಾರ, ಪ್ರವಾಸದಲ್ಲಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭೋದನೆಗಳಲ್ಲಿ ಭಾಗಿಯಾಗಬಾರದು. ಈ ಬಗ್ಗೆ 14 ವಿದೇಶಿ ಪ್ರಜೆಗಳು ಮತ್ತು ಮಸೀದಿ ಅಧಿಕಾರಿಗಳಲ್ಲಿ ವಿವರಣೆ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com