ಪ್ರಾಂಜಲ್ ಪಾಟೀಲ್ ಅಧಿಕಾರ ಸ್ವೀಕಾರ
ದೇಶ
ವೈಕಲ್ಯಕ್ಕೆ ಸೆಡ್ಡು ಹೊಡೆದ ಐಎಎಸ್ ಅಧಿಕಾರಿ: ಉಪ ವಿಭಾಗಾಧಿಕಾರಿಯಾಗಿ ಪ್ರಾಂಜಲ್ ಪಾಟೀಲ್ ನೇಮಕ
ಅಂಧತ್ವಕ್ಕೆ ಸೆಡ್ಡು ಹೊಡೆದಿರುವ ಐಎಎಸ್ ಅಧಿಕಾರಿ ಪ್ರಾಂಜಲ್ ಪಾಟೀಲ್ ಕೇರಳದ ತಿಕುವನಂತಪುರ ಉಪ ವಿಭಾಗಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ತಿರುವನಂತಪುರ: ಅಂಧತ್ವಕ್ಕೆ ಸೆಡ್ಡು ಹೊಡೆದಿರುವ ಐಎಎಸ್ ಅಧಿಕಾರಿ ಪ್ರಾಂಜಲ್ ಪಾಟೀಲ್ ಕೇರಳದ ತಿಕುವನಂತಪುರ ಉಪ ವಿಭಾಗಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರದ ಉಲ್ಲಾಸ್ ನಗರದ ಪ್ರಾಂಜಲ್ ಪಾಟೀಲ್ ತಮ್ಮ ಅಂಗ ವೈಕಲ್ಯವನ್ನು ಮೀರೀ ಬೆಳೆದಿದ್ದಾರೆ, ಈ ಮೂಲಕ ದೇಶದ ಮೊದಲ ಮಹಿಳಾ ಅಂಧ ಐಎಎಸ್ ಅಧಿಕಾರಿ ಎನಿಸಿದ್ದಾರೆ.
ತಮ್ಮ ಸಹಾಯಕ ಅಧಿಕಾರಿ ಅನುಕುಮಾರಿ ಅವರ ಜೊಕೆ ಕಚೇರಿಗೆ ಬಂದ ಅವರು ಕಲೆಕ್ಟರ್ ಕೆ, ಗೋಪಾಲ ಕೃಷ್ಣನ್ ಅವರ ಚೇಂಬರ್ ನಲ್ಲಿ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ,. ಜನರ ಒಳಿತಾಗಿಗಿ ಉತ್ತಮ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.
ಆರನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಪ್ರಾಂಜಲ್ ಯಾವುದೇ ಐಎಎಸ್ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿರಲಿಲ್ಲ, ಅಧ್ಯಯನ ಮತ್ತು ತಮ್ಮ ಕೆಲಸಗಳಿಗಾಗಿ ದೃಷ್ಟಿ ಹೀನರಿಗಾಗಿ ಇರುವ ವಿಶೇಷ ಸಾಫ್ಟ್ ವೇರೆ ಬಳಸುತ್ತಾರೆ.

