ಮಂದಿರ ನಿರ್ಮಾಣ; ಸಂಚಲನ ಸೃಷ್ಟಿಸಿದ ಬಿಜೆಪಿ ನಾಯಕ ಸಾಕ್ಷಿ ಮಹಾರಾಜ್ ಹೇಳಿಕೆ
ನವದೆಹಲಿ: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಗ್ಗೆ ಬಿಜೆಪಿ ಸಂಸದ ಸಾಕ್ಷಿಮಹಾರಾಜ್ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್, ಆಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿದ ದಿನವಾದ ಡಿಸೆಂಬರ್ 6 ರಂದು ರಾಮಮಂದಿರ ನಿರ್ಮಾಣ ಆರಂಭಿಸುವುದಾಗಿ ಅಂದೇ ಪ್ರಕಟಿಸಿದ್ದೆವು ಎಂದು ತಿಳಿಸಿದ್ದಾರೆ.
1992ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಬರುವ ಡಿಸೆಂಬರ್ 6 ರಿಂದ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಅವರು ಘೋಷಿಸಿದ್ದಾರೆ. ತಮ್ಮ ಹೇಳಿಕೆ ತಾರ್ಕಿಕವಾಗಿರಬಹುದು. ಆದರೆ, ಮಸೀದಿಯನ್ನು ಎಂದು ದ್ವಂಸಗೊಳಿಸಿದೆವೊ, ಮಂದಿರ ನಿರ್ಮಾಣವನ್ನು ಅದೇ ದಿನ ಆರಂಭಿಸಲಿದ್ದೇವೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತಿಯಲ್ಲಿ ಇದು ಸಾಕಾರವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಬಾಬರ್ ಆಕ್ರಮಣಕಾರ. "ಆತ ನಮ್ಮ ಪೂರ್ವಿಕನಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಒಪ್ಪಿಕೊಂಡಿದೆ ಎಂದು ತಮ್ಮ ಲೋಕಸಭಾ ಕ್ಷೇತ್ರದ ಉನ್ನಾವೋದಲ್ಲಿ ಸಾಕ್ಷಿ ಮಹಾರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಆಯೋಧ್ಯೆ ಪ್ರಕರಣ ಸಂಬಂಧ ಮಹತ್ವ ಹೇಳಿಕೆ ನೀಡಿದ್ದು, ಆಗಿದ್ದು.. ಆಯ್ತು ಆಯೋಧ್ಯೆ ವಿಚಾರಣೆ ಇಂದು ಪೂರ್ಣಗೊಳಿಸಲಾಗುವುದು. ಈ ಹಂತದಲ್ಲಿ ವಿವಾದ ಕುರಿತು ಯಾವುದೇ ಹೊಸ ಆರ್ಜಿ ವಿಚಾರಣೆಗೆ ಸ್ವೀಕರಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ