ದೆಹಲಿ - ಕಾಬುಲ್ ಸ್ಪೈಸ್ ಜೆಟ್‌ ವಿಮಾನ ಸುತ್ತುವರಿದಿದ್ದ ಪಾಕ್‌ ಎಫ್‌-16, ಆತಂಕಗೊಂಡಿದ್ದ ಪ್ರಯಾಣಿಕರು!

ಕಳೆದ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವಾಯುದಾಳಿ ನಂತರ ಭಾರತ - ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ದೆಹಲಿಯಿಂದ ಕಾಬುಲ್‌ಗೆ ತೆರಳುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನವನ್ನು ಪಾಕಿಸ್ತಾನ ವಾಯುಪಡೆಯ ಎರಡು ಎಫ್‌-16 ಯುದ್ಧ ವಿಮಾನಗಳು ಸುತ್ತುವರೆದಿದ್ದವು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವಾಯುದಾಳಿ ನಂತರ ಭಾರತ - ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ದೆಹಲಿಯಿಂದ ಕಾಬುಲ್‌ಗೆ ತೆರಳುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನವನ್ನು ಪಾಕಿಸ್ತಾನ ವಾಯುಪಡೆಯ ಎರಡು ಎಫ್‌-16 ಯುದ್ಧ ವಿಮಾನಗಳು ಸುತ್ತುವರೆದಿದ್ದವು. ಇದರಿಂದ ವಿಮಾನದಲ್ಲಿದ್ದ ಸುಮಾರು 120 ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು.

ಕಳೆದ ಸೆಪ್ಟೆಂಬರ್ 23ರಂದು ಈ ಘಟನೆ ನಡೆದಿದ್ದು, ಕಾಬುಲ್‌ಗೆ ತೆರಳುತ್ತಿದ್ದ ಎಸ್‌ಜಿ-21 ಸ್ಪೈಸ್ ಜೆಟ್ ವಿಮಾನ ಪಾಕಿಸ್ತಾನ ವಾಯು ಮಾರ್ಗದಲ್ಲಿತ್ತು ಎಂದು ತಿಳಿದು ಬಂದಿದೆ. ಪಾಕಿಸ್ತಾನ ಎಟಿಸಿ (ಏರ್‌ ಟ್ರಾಫಿಕ್‌ ಕಂಟ್ರೋಲ್‌)ನಲ್ಲಾದ ಗೊಂದಲದಿಂದ ವಾಯುಮಾರ್ಗದಲ್ಲಿ ಈ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪಾಕಿಸ್ತಾನದ ವಾಯು ಮಾರ್ಗ ಭಾರತಕ್ಕೆ ಬಂದ್ ಮಾಡಿ ಆದೇಶ ಹೊರಡಿಸಿರಲಿಲ್ಲ. ಆದರೆ ಪಾಕಿಸ್ತಾನದ ಎಟಿಸಿಯಲ್ಲಿ ಸ್ಪೈಸ್‌ ಜೆಟ್‌ ವಿಮಾನದ ಕೋಡ್‌ ಎಸ್‌ಜಿ ಬದಲಾಗಿ ಐಎ(ಇಂಡಿಯನ್ ಏರ್‌ಫೋರ್ಸ್‌ ಅಥವಾ ಇಂಡಿಯನ್‌ ಆರ್ಮಿ) ಎಂದು ತಪ್ಪಾಗಿ ಗ್ರಹಿಸಲಾಗಿದೆ. ಹೀಗಾಗಿ ಎಟಿಸಿ ತಕ್ಷಣ ಭಾರತೀಯ ವಾಯುಸೇನೆಯ ವಿಮಾನವೊಂದು ಪಾಕ್‌ ವಲಯದಲ್ಲಿ ಸಂಚರಿಸುತ್ತಿದೆ ಎಂದು ಪಾಕ್‌ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪಾಕ್‌ ವಾಯುಪಡೆಯ ಎರಡು ಎಫ್‌-16 ಕಳುಹಿಸಿದೆ.

ಸ್ಪೈಸ್‌ ಜೆಟ್‌ ಪೈಲಟ್‌ಗಳಲ್ಲಿ ವಾಯು ಮಾರ್ಗದ ಅಲ್ಟಿಟ್ಯೂಡ್‌ ತಕ್ಷಣ ಕಡಿಮೆಗೊಳಿಸುವಂತೆ ಎಫ್‌-16 ಪೈಲಟ್‌ಗಳು ಸೂಚನೆ ನೀಡಿದ್ದಾರೆ. ಈ ವೇಳೆ ಸ್ಪೈಸ್‌ಜೆಟ್‌ ಪೈಲಟ್‌ ಇದು ಭಾರತೀಯ ಪ್ರಯಾಣಿಕರ ವಿಮಾನ ಸಂಸ್ಥೆ ಎಂಬುದನ್ನು ಮನದಟ್ಟು ಮಾಡಿದ್ದಾರೆ.

ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರು ಇರುವುದನ್ನು ಖಚಿತ ಪಡಿಸಿದ ಬಳಿಕ ಈ ಗೊಂದಲ ಬಗೆ ಹರಿದಿದೆ. ಅಫಘಾನಿಸ್ತಾನದ ವಾಯುಗಡಿ ವರೆಗೆ ಎಫ್‌-16 ಯುದ್ಧ ವಿಮಾನಗಳು ಸ್ಪೈಸ್‌ ಜೆಟ್‌ ವಿಮಾನದ ಹಿಂಬಾಲಿಸಿ, ಮತ್ತೆ ತೆರಳಿದೆ ಎಂದು ಡಿಜಿಸಿಎ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com