ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೆಣ್ಣು-ಗಂಡು ಮಕ್ಕಳಿಗೆ ಶಾಲೆ ಮತ್ತು ಮನೆಯಲ್ಲಿ ಸಮಾನ ಗಮನ, ಪ್ರಾಶಸ್ತ್ಯ ಕೊಡಿ: ಎನ್ ಸಿಇಆರ್ ಟಿ 

ಚಿಕ್ಕ ಮಕ್ಕಳ ಹಂತದಲ್ಲಿಯೇ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕು. ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಹೆಣ್ಣು-ಗಂಡು ಎಂಬ ಬೇಧ-ಭಾವ ತೋರಿಸಬಾರದು ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಎನ್ ಸಿಇಆರ್ ಟಿ ಹೇಳಿದೆ.
Published on

ನವದೆಹಲಿ: ಚಿಕ್ಕ ಮಕ್ಕಳ ಹಂತದಲ್ಲಿಯೇ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕು. ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಹೆಣ್ಣು-ಗಂಡು ಎಂಬ ಬೇಧ-ಭಾವ ತೋರಿಸಬಾರದು ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಎನ್ ಸಿಇಆರ್ ಟಿ ಹೇಳಿದೆ.


ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಶೈಕ್ಷಣಿಕ ಅಭಿವೃದ್ಧಿ ಅಂಗವಾಗಿರುವ ಎನ್ ಸಿಇಆರ್ ಟಿ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಲಿಂಗ ಸಮಾನತೆಯನ್ನು ಕೂಡ ಶಿಫಾರಸು ಮಾಡಿದೆ.


ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ವೃತ್ತಿಯಲ್ಲಿರುವಂತೆ ಪೂರ್ವ ಪ್ರಾಥಮಿಕ ಹಂತದ ಶಾಲೆಗಳಲ್ಲಿ ಶಿಕ್ಷಕ-ಶಿಕ್ಷಕಿಯರು ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ವಯಸ್ಸು, ಹಂತ ಮತ್ತು ಸಂದರ್ಭವನ್ನು ನೋಡಿಕೊಂಡು ಸಮಾನ ಗಮನ, ಗೌರವ ಮತ್ತು ಸಮಾನ ಅವಕಾಶಗಳನ್ನು ನೀಡಬೇಕು. ಯಾವುದೇ ದೃಷ್ಟಿಯಲ್ಲಿಯೂ ಲಿಂಗ ತಾರತಮ್ಯ ತೋರಿಸಬಾರದು. ಎರಡು ಲಿಂಗದ ಮಕ್ಕಳಿಗೆ ಸಮಾನವಾಗಿ ಪುಸ್ತಕ, ಆಟದ ವಸ್ತು ಮತ್ತು ಇತರ ಚಟುವಟಿಕೆಗಳನ್ನು ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.


ಭಾಷೆ ಬಳಕೆ ಸಹ ಎರಡೂ ಲಿಂಗಗಳಿಗೆ ಒಂದೇ ರೀತಿ ಬಳಸಬೇಕು. ಹೆಣ್ಣು-ಗಂಡು ಮಕ್ಕಳಿಬ್ಬರೂ ಸಮಾನರು, ಸಮಾನವಾದ ಕೌಶಲ್ಯ, ಸಾಮರ್ಥ್ಯ ಹೊಂದಿರುವವರು ಎಂದು ತೋರಿಸಬೇಕು, ಇನ್ನು ವಿಶೇಷ ಅಗತ್ಯವನ್ನು ಹೊಂದಿರುವ ಮಕ್ಕಳಿಗೆ ಸಹ ಬೇರೆ ಸಾಮಾನ್ಯ ಮಕ್ಕಳಿಗೆ ನೀಡುವ ಸೌಲಭ್ಯವನ್ನು ಕೊಡಬೇಕು ಎಂದು ಹೇಳಿದೆ.


ಇದು ಕೇವಲ ಶಾಲೆಗೆ ಮಾತ್ರ ಸೀಮಿತವಾಗಿರದೆ ಮನೆಗಳಲ್ಲಿ ಪೋಷಕರು ಕೂಡ ತಮ್ಮ ಮಕ್ಕಳಲ್ಲಿ ಗಂಡು-ಹೆಣ್ಣು ಎಂದು ಭೇದ ತೋರಿಸಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.


ಇನ್ನು ವಿಶೇಷ ಚೇತನ ಮಕ್ಕಳನ್ನು ಮೊದಲೇ ಸೇರಿಸಿಕೊಳ್ಳುವ ಮೂಲಕ ಅವರಲ್ಲಿ ಕಲಿಕೆ ತೊಂದರೆಗಳನ್ನು ನಿವಾರಿಸಿ ಮಕ್ಕಳ ಬೆಳವಣಿಗೆಯನ್ನು ವೃದ್ಧಿಗೊಳಿಸುವ ಮೂಲಕ ಅವರು ಬೇರೆ ಮಕ್ಕಳ ಜೊತೆ ಸರಿಸಮನಾಗುವಂತೆ ಮಾಡಬಹುದು ಎಂದು ಎನ್ ಸಿಇಆರ್ ಟಿ ಮಾರ್ಗಸೂಚಿ ಹೇಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com