ನವದೆಹಲಿ: ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಮತ್ತು ಅಸಮತೋಲನಗಳ ಹಿನ್ನೆಲೆಯಲ್ಲಿ ಬಹುಪಕ್ಷೀಯ ಮಟ್ಟದಲ್ಲಿ ಜಾಗತಿಕ ಸಹಕಾರ ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಮೆರಿಕದ ವಾಷಿಂಗ್ಟನ್ ಡಿಸಿ ಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿತ್ತ ನಿಧಿ(ಐಎಂಎಫ್) ಮತ್ತು ವಿಶ್ವಬ್ಯಾಂಕ್ನ 2019 ರ ವಾರ್ಷಿಕ ಸಭೆಗಳಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ವಿತ್ತ ಮತ್ತು ಹಣಕಾಸು ಸಮಿತಿ (ಐಎಂಎಫ್ಸಿ)ಯ ಪೂರ್ಣಾಧಿವೇಶನದಲ್ಲಿ ಮಾತನಾಡಿ ಅವರು ಈ ವಿಷಯ ತಿಳಿಸಿದ್ದಾರೆ. ದೇಶಗಳ ಹಣಕಾಸು, ವಿತ್ತೀಯ ಮತ್ತು ರಚನಾತ್ಮಕ ಕ್ರಮಗಳನ್ನು ಒಟ್ಟು ಸೇರಿಸಿ ಜಾರಿಗೊಳಿಸಲು ಸಮತೋಲಿತ ವಿಧಾನ ಅಳವಡಿಸಿಕೊಂಡರೆ, ದೇಶಗಳು ಅಭಿವೃದ್ಧಿ ಸಾಮರ್ಥ್ಯ ಸಾಧಿಸಲು ಸಹಕಾರಿಯಾಗಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
Advertisement