''ಜೆಎನ್ ಯುನಲ್ಲಿ ನಿರ್ಮಲಾ ಸೀತಾರಾಮನ್ ನನ್ನ ಸಮಕಾಲೀನರಾಗಿದ್ದರು'': ಅಭಿಜಿತ್ ಬ್ಯಾನರ್ಜಿ 

ದೆಹಲಿಯ ಜವಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ನಾನು ಮತ್ತು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಒಟ್ಟಿಗೆ ಓದಿದವರು, ನಾವಿಬ್ಬರೂ ಸಮಕಾಲೀನರು ಎಂದಿದ್ದಾರೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ. 
ನಿರ್ಮಲಾ ಸೀತಾರಾಮನ್-ಅಭಿಜಿತ್ ಬ್ಯಾನರ್ಜಿ(ಸಂಗ್ರಹ ಚಿತ್ರ)
ನಿರ್ಮಲಾ ಸೀತಾರಾಮನ್-ಅಭಿಜಿತ್ ಬ್ಯಾನರ್ಜಿ(ಸಂಗ್ರಹ ಚಿತ್ರ)
Updated on

ನವದೆಹಲಿ: ದೆಹಲಿಯ ಜವಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ನಾನು ಮತ್ತು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಒಟ್ಟಿಗೆ ಓದಿದವರು, ನಾವಿಬ್ಬರೂ ಸಮಕಾಲೀನರು, ಹಲವು ವಿಷಯಗಳಲ್ಲಿ ನಾವು ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದೆವು ಎಂದಿದ್ದಾರೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ.


ಭಾರತದ ಆರ್ಥಿಕ ಪರಿಸ್ಥಿತಿ ತೀವ್ರ ಕಷ್ಟದಲ್ಲಿದೆ ಎಂದು ಹೇಳಿರುವ ಅಭಿಜಿತ್ ಬ್ಯಾನರ್ಜಿ ಹೇಳಿಕೆಗೆ ಇದುವರೆಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್, ಅಭಿಜಿತ್ ಬ್ಯಾನರ್ಜಿಯವರು ಎಡಪಂಥೀಯರು, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ಎಡಪಂಥೀಯರಿಗೆ ಸಾಂಪ್ರದಾಯಿಕ ಭದ್ರಕೋಟೆಯಂತೆ ಎಂದು ಹೇಳಿದ್ದರು.


ಈ ಬಗ್ಗೆ ನಿನ್ನೆ ಖಾಸಗಿ ಸುದ್ದಿವಾಹಿನಿ ಸಂದರ್ಶನದಲ್ಲಿ ಮಾತನಾಡುವಾಗ ಅಭಿಜಿತ್ ಬ್ಯಾನರ್ಜಿ, ವಿಶ್ವವಿದ್ಯಾಲಯದ ಬಗ್ಗೆ ಕೇಳಿಬರುತ್ತಿರುವ ಹೇಳಿಕೆಗಳು,ಟೀಕೆಗಳು ದುರದೃಷ್ಟಕರ, ನಾನು ಅಲ್ಲಿ ಅಧ್ಯಯನ ಮಾಡುತ್ತಿರುವಾಗ ನನಗೆ ಚೆನ್ನಾಗಿ ಚಿರಪರಿಚಿತರು, ನನ್ನ ಹಾಗೆಯೇ ವಿಷಯಗಳ ಬಗ್ಗೆ ಆಲೋಚನೆ, ಅಭಿಪ್ರಾಯ ಹೊಂದಿದ್ದವರು ಮತ್ತು ನನ್ನ ಸಮಕಾಲೀನರಾಗಿದ್ದವರು ನಿರ್ಮಲಾ ಸೀತಾರಾಮನ್ ಅವರು. ನಾವು ಆತ್ಮೀಯ ಸ್ನೇಹಿತರೇನೂ ಆಗಿರಲಿಲ್ಲ ಆದರೆ ಸ್ನೇಹಿತರಾಗಿದ್ದೆವು ಮತ್ತು ನಾವು ವಿಚಾರಗಳಲ್ಲಿ ಬಹಳ ವ್ಯತ್ಯಾಸ, ಭಿನ್ನತೆಯೇನೂ ಹೊಂದಿರಲಿಲ್ಲ ಎಂದರು.


ಭಾರತದ ಆರ್ಥಿಕತೆ ಬಗ್ಗೆ ಇತ್ತೀಚೆಗೆ ಬ್ಯಾನರ್ಜಿ ನೀಡಿದ ಹೇಳಿಕೆ ಆಡಳಿತಾರೂಢ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com