ಹರಿಯಾಣ ವಿಧಾನಸಭೆ ಚುನಾವಣೆ: ಯೋಗೇಶ್ವರ್, ಬಬಿತಾಗೆ ಸೋಲು, ಸಂದೀಪ್ ಗೆ ಜಯ

ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿ ಪಟು ಯೋಗೇಶ್ವರ್ ದತ್ ಹಾಗೂ ಸ್ಟಾರ್ ಕುಸ್ತಿ ಆಟಗಾರ್ತಿ ಬಬಿತಾ ಪೋಗಟ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಬಬಿತಾ ಪೋಗಟ್ - ಯೋಗೇಶ್ವರ್ ದತ್ - ಸಂದೀಪ್ ಸಿಂಗ್
ಬಬಿತಾ ಪೋಗಟ್ - ಯೋಗೇಶ್ವರ್ ದತ್ - ಸಂದೀಪ್ ಸಿಂಗ್
Updated on

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿ ಪಟು ಯೋಗೇಶ್ವರ್ ದತ್ ಹಾಗೂ ಸ್ಟಾರ್ ಕುಸ್ತಿ ಆಟಗಾರ್ತಿ ಬಬಿತಾ ಪೋಗಟ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಅಖಾಡಕ್ಕೆ ಇಳಿದಿದ್ದ ಕುಸ್ತಿ ಪಟುಗಳು ಸೋಲಿನ ರುಚಿ ಕಂಡಿದ್ದಾರೆ. ಆದರೆ, ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್ ಭರ್ಜರಿ ಜಯ ಸಾಧಿಸಿದ್ದಾರೆ.

ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ನ ಶ್ರೀಕೃಷ್ಣ ಹೂಡಾ ಸೋಲಿಸಿದರೆ, ಬಬಿತಾ, ಸೋಮವೀರ್ ಅವರ ವಿರುದ್ಧ ನಿರಾಸೆ ಕಂಡಿದ್ದಾರೆ. 

ಹರಿಯಾಣದ ಪೆಹೋವಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಹಾಕಿ ಆಟಗಾರ ಸಂದೀಪ್ ಭರ್ಜರಿ ಜಯ ದಾಖಲಿಸಿದ್ದಾರೆ. ಇವರು, ಕಾಂಗ್ರೆಸ್ ನ ಮಂದೀಪ್ ಸಿಂಗ್ ಅವರನ್ನು ಮಣಿಸಿದರು. ಸಂದೀಪ್ 42,533 ಮತ ಪಡೆದರೆ, ಮಂದೀಪ್ 37,202 ಮತ ತಮ್ಮದಾಗಿಸಿಕೊಂಡಿದ್ದಾರೆ. 

ಬರೋದಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಯೋಗೇಶ್ವರ್ 36,044 ಮತ ಪಡೆದರೆ, ಕಾಂಗ್ರೆಸ್ ನ ಕೃಷ್ಣ 41,256 ಮತ ಗಳಿಸಿದರು. 

ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಎರಡು ಬಾರಿ ಬಂಗಾರದ ಸಾಧನೆ ಮಾಡಿರುವ ಬಬಿತಾ ಪೋಗಟ್ ದಾದರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇವರು 24,502 ಮತ ಪಡೆದ ಬೀಗಿದರೆ, ಸೋಮವೀರ್ 43,589 ಮತ ಪಡೆದರು. 

ಯೋಗೇಶ್ವರ್ ಹಾಗೂ ಬಬಿತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹರಿಯಾಣ ಪೋಲಿಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಯೋಗೇಶ್ವರ್ ಅವರು ಡಿಎಸ್ ಪಿ ಹುದ್ದೆ ತ್ಯಜಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com