ಸುರೇಂದ್ರ ಸಿಂಗ್
ಸುರೇಂದ್ರ ಸಿಂಗ್

ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಯಾಗದಿದ್ದರೇ ಹಿಂದುತ್ವಕ್ಕೆ ಉಳಿಗಾಲವಿಲ್ಲ: ಬಿಜೆಪಿ ಶಾಸಕ

ಒಂದು ವೇಳೆ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರದಿದ್ದರೆ ಹಿಂದುತ್ವವಾದ ಸುರಕ್ಷಿತವಾಗಿರುವುದ್ಲಿಲ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ,
Published on

ಬಲ್ಲಿಯಾ: ಒಂದು ವೇಳೆ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರದಿದ್ದರೆ ಹಿಂದುತ್ವವಾದ ಸುರಕ್ಷಿತವಾಗಿರುವುದ್ಲಿಲ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ,

ಎಐಯುಡಿಎಫ್ ಮುಖಂಡ ಬದ್ರುದ್ದೀನ್ ಅಜ್ಮಲ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮರು ಹೆಚ್ಚೆಚ್ಚು ಮಕ್ಕಳನ್ನು ಹೆರುವುದನ್ನು ಮುಂದುವರಿಸಲಿದ್ದಾರೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿಕೆ ನೀಡಿದ್ದರು. 

ಈ ಹೇಳಿಕೆಗೆ ತಿರುಗೇಟು ನೀಡಿರುವ  ಶಾಸಕ ಸುರೇಂದ್ರ ಸಿಂಗ್ ,ಮುಂದಿನ 50 ವರ್ಷಗಳಲ್ಲಿ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ  ಕಾಯಿದೆ ಜಾರಿಗೆ ಬರದಿದ್ದರೇ ಭಾರತದಲ್ಲಿಯೇ ಹಿಂದೂಧರ್ಮಕ್ಕೆ ರಕ್ಷಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ, ಇದಕ್ಕೆ ಉದಾಹರಣೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸದಾ ಭದ್ರತೆಸ ಪಡೆ ನಿಯೋಜಿಸುವುದನ್ನು ನೀವು ನೋಡಬಹುದದು. 

ಪಶ್ಚಿಮ ಬಂಗಾಳದಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದರೂ ಯಾರೋಬ್ಬರು ಕ್ರಮ ಕೈಗೊಳ್ಳುತ್ತಿಲ್ಲ, ಬಿಜೆಪಿ ಅಧಿಕಾರ ಇಲ್ಲದ ಸ್ಥಳಗಳಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಅಟ್ಟಹಾಸ ಮೆರೆಯುತ್ತಿದೆ ಎಂದು ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com