ಗೋ ಮೂತ್ರ ಕ್ಯಾನ್ಸರ್ ಗೆ ಮದ್ದು: ಕೇಂದ್ರ ಸಚಿವ ಚೌಬೆ ಹೇಳಿಕೆ ಟೀಕಿಸಿದ ಬಿಎಸ್ಪಿ

ಗೋ ಮೂತ್ರದಿಂದ ಮಾಡಿದ ಔಷಧಗಳು ಕ್ಯಾನ್ಸರ್ ರೋಗವನ್ನು ಗುಣಪಡಿಸಬಲ್ಲವು ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ನೀಡಿರುವ ಹೇಳಿಕೆಯನ್ನು ಬಿಎಸ್ಪಿ ಮುಖಂಡ ಸುಧೀಂದ್ರ ಬಾಡೊರಿಯಾ ತೀವ್ರವಾಗಿ ಟೀಕಿಸಿದ್ದಾರೆ.
ಬಿಎಸ್ಪಿ ಮುಖಂಡ
ಬಿಎಸ್ಪಿ ಮುಖಂಡ
Updated on

ನವದೆಹಲಿ: ಗೋ ಮೂತ್ರದಿಂದ ಮಾಡಿದ ಔಷಧಗಳು ಕ್ಯಾನ್ಸರ್ ರೋಗವನ್ನು ಗುಣಪಡಿಸಬಲ್ಲವು ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ನೀಡಿರುವ ಹೇಳಿಕೆಯನ್ನು ಬಿಎಸ್ಪಿ ಮುಖಂಡ ಸುಧೀಂದ್ರ ಬಾಡೊರಿಯಾ ತೀವ್ರವಾಗಿ ಟೀಕಿಸಿದ್ದಾರೆ.

ಇಂತಹ ಗೊಂದಲಕಾರಿ ಹೇಳಿಕೆಗಳನ್ನು ನೀಡುವುದು ಅಶ್ವಿನಿ ಚೌಬೆ ಅವರ ಹವ್ಯಾಸವಾಗಿದೆ. ರಾಷ್ಟ್ರ ವಿಜ್ಞಾನ,, ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ  ಪ್ರಗತಿಪಥದಲ್ಲಿ ಸಾಗುತ್ತಿರುವಾಗ  ಚೌಬೆ ಅವರ ಇಂತಹ ಹೇಳಿಕೆ ಮುಜುಗರವನ್ನುಂಟು ಮಾಡುತ್ತವೆ ಎಂದರು.

ಚೌಬೆ ಅವರ ಹೇಳಿಕೆ ಆಕ್ಷೇಪಾರ್ಹವಾಗಿವೆ. ಯಾವುದೇ ವೈಜ್ಞಾನಿಕ ಜ್ಞಾನ, ಪ್ರಯೋಗಾತ್ಮಕ ಹಾಗೂ ವೈದ್ಯಕೀಯ ಇಲಾಖೆ, ಆರೋಗ್ಯ ಸಚಿವಾಲಯೊಂದಿಗೆ ಸಮಾಲೋಚಿಸದೆ ಸರ್ಕಾರದ ಹಿರಿಯ ಸಚಿವರೊಬ್ಬರು ಇಂತಹ ಹೇಳಿಕೆಗಳನ್ನು ನೀಡುವುದು ಆಕ್ಷೇಪಾರ್ಹವಾಗಿವೆ ಎಂದು ಅವರು ಟೀಕಿಸಿದ್ದಾರೆ.

ಗೋ ಮೂತ್ರವನ್ನು ಅನೇಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕ್ಯಾನ್ಸರ್ ನಂತರ ರೋಗವನ್ನು ಗುಣಪಡಿಸಬಲ್ಲಂತಹ ಔಷಧಗಳಿಗೆ ಇದನ್ನು ಬಳಸು್ತಾರೆ. ಆಯುಷ್ ಸಚಿವಾಲಯ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಅಶ್ವಿನಿ ಚೌಬೆ ಶನಿವಾರ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com