ಮೃದು ಹಿಂದುತ್ವ ಕಾಂಗ್ರೆಸ್ ಅನ್ನು ಶೂನ್ಯಕ್ಕಿಳಿಸಬಹುದು: ಶಶಿ ತರೂರ್ ಎಚ್ಚರಿಕೆ
ನವದೆಹಲಿ: ಜಾತ್ಯತೀತ ಸ್ವರೂಪ ಉಳಿಸಿಕೊಳ್ಳುವುದು ಕಾಂಗ್ರೆಸ್ ಕರ್ತವ್ಯ ಎಂದಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಕೋಕ್ ಲೈಟ್(ಸಕ್ಕರೆ ರಹಿತ ಕೋಕಾ ಕೋಲಾ) ಇದ್ದ ಹಾಗೆ ಹಿಂದುತ್ವ ಲೈಟ್(ಮೃದು ಹಿಂದುತ್ವ) ಎಂಬ ಧೋರಣೆಯನ್ನು ಅನುಸರಿಸಿದರೆ ಅದು ಕೊನೆಗೆ ಕಾಂಗ್ರೆಸ್ ಅನ್ನು ಸೊನ್ನೆಗೆ ಇಳಿಸಬಹುದು ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದೂ ಧರ್ಮ ನಿಜ ಅರ್ಥದ ಹಿಂದೂ ಧರ್ಮ ಅಲ್ಲವೇ ಅಲ್ಲ. ಬದಲಿಗೆ ಧರ್ಮವೊಂದರ ಅತಿಘೋರ ವಿಕೃತ್ತಿ. ರಾಜಕೀಯ ಮತ್ತು ಚುನಾವಣಾ ಲಾಭದ ಸಾಧನ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಶಶಿ ತರೂರ್ ಆರೋಪಿಸಿದ್ದಾರೆ.
ಯುವಕರು ಸೇರಿದಂತೆ ಸಮಾನ ಮನಸ್ಕ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇತ್ತೀಚಿಗೆ ತೀವ್ರಗೊಳ್ಳುತ್ತಿರುವ ದುರಭಿಮಾನದ ಪ್ರವೃತ್ತಿಯನ್ನು ವಿರೋಧಿಸಲು ಇವರು ಕಟಿಬದ್ಧರಾಗಿದ್ದಾರೆ ಎಂದು ತರೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರೀತಿ ಬಹುಸಂಖ್ಯಾತರನ್ನು ಓಲೈಸುವುದೇ ಹಿಂದಿ ಭಾಷಿಕ ಪ್ರದೇಶದಲ್ಲಿ ಕಾಂಗ್ರೆಸ್ ಸಮಸ್ಯೆಗಳಿಗೆ ಉತ್ತರ ಎಂದು ಹೇಳುವುದು ತಪ್ಪು. ಮೂಲ ಮತ್ತು ವಿಫಲವಾದ ಅನುಕರಣೆಯ ನಡುವಣ ಆಯ್ಕೆಯನ್ನು ಮತದಾರರ ಮುಂದಿಟ್ಟರೆ ಅವರು ಪ್ರತಿಬಾರಿಯೂ ಮೂಲವನ್ನೇ ಆಯ್ಕೆ ಮಾಡುತ್ತಾರೆ ಎಂದು ಶಶಿ ತರೂರ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ