ಟಿಎನ್ ಐಇ ಇಂಪ್ಯಾಕ್ಟ್: 1 ರು. ಗೆ ಇಡ್ಲಿ ಮಾರಾಟ ಮಾಡುವ ಅಜ್ಜಿ ಅದೃಷ್ಟ ಬದಲಾಯಿಸಿತು ಮಹೀಂದ್ರಾ ಟ್ವೀಟ್!

ಸುಮಾರು 30 ವರ್ಷಗಳಿಂದ 1 ರು. ಗೆ ಇಡ್ಲಿ ನೀಡಿ ಸೇವೆ ಮಾಡುತ್ತಿರುವ ಅಜ್ಜಿಯ ಅದೃಷ್ಟ ಬದಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಿಂದಾಗಿ ಅಜ್ಜಿಯ ಅದೃಷ್ಟ ಬದಲಾಯಿಸಿದೆ.
1 ರು ಗೆ ಇಡ್ಲಿ ಮಾರುವ ಅಜ್ಜಿ
1 ರು ಗೆ ಇಡ್ಲಿ ಮಾರುವ ಅಜ್ಜಿ

ಕೊಯಂಬತ್ತೂರು: ಸುಮಾರು 30 ವರ್ಷಗಳಿಂದ 1 ರು. ಗೆ ಇಡ್ಲಿ ನೀಡಿ ಸೇವೆ ಮಾಡುತ್ತಿರುವ ಅಜ್ಜಿಯ ಅದೃಷ್ಟ ಬದಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಿಂದಾಗಿ ಅಜ್ಜಿಯ ಅದೃಷ್ಟ ಬದಲಾಯಿಸಿದೆ.

ಕಳೆದ ಮೂರು ದಶಕಗಳಿಂದ ಕೇವಲ ಒಂದು ರುಪಾಯಿಗೆ ಇಡ್ಲಿ ಮಾರಾಟ ಮಾಡುತ್ತಿದ್ದಾರೆ,  ಇಡ್ಲಿಯನ್ನು ಆಕೆ ಸೌದೆ ಒಲೆಯಲ್ಲಿ ಬೇಯಿಸುತ್ತಿದ್ದಾರೆ,

ಆನಂದ್ ಮಹೀಂದ್ರಾ ಇತ್ತೀಚೆಗೆ  ಅವರು ಮಾಡಿರುವ ಮತ್ತೊಂದು ಟ್ವೀಟ್ ಭಾರೀ ಸೌಂಡ್ ಮಾಡುತ್ತಿದ್ದು, ಇದು ಬಡ ಅಜ್ಜಿಯೊಬ್ಬರ ಅದೃಷ್ಟ ಬದಲಾಯಿಸಿದೆ. 

ತಮಿಳುನಾಡಿನ ವದಿವೇಲಂಪಾಲಾಯಂ ಪ್ರದೇಶದಲ್ಲಿ ಕಮಲಾಥಲ್ ಹೆಸರಿನ ಬಡ ಅಜ್ಜಿ ಪುಟ್ಟ ಅಂಗಡಿಯನ್ನು ನಡೆಸುತ್ತಿದ್ದಾರೆ. ಆರ್ಥಿಕ ವಿಚಾರದಲ್ಲಿ ಇವರು ಬಡವರಾಗಿದ್ದರೂ ಹೃದಯ ಶ್ರೀಮಂತಿಕೆಯಲ್ಲಿ ಇವರನ್ನು ಮೀರಿಸುವವರಿಲ್ಲ. 

ಕೇವಲ 1 ರೂಪಾಯಿಗೆ ಇಡ್ಲಿ ಮಾರಿ ಹಸಿದವರ ಹೊಟ್ಟೆ ತಣ್ಣಗಿಡುತ್ತಿದ್ದ ಅಜ್ಜಿ ಈಗ ಆನಂದ್ ಮಹೀಂದ್ರಾರ ಒಂದು ಟ್ವೀಟ್ ನಿಂದ ಫೇಮಸ್ ಆಗಿದ್ದಾರೆ. ಅಲ್ಲದೇ ಕಟ್ಟಿಗೆ ಒಲೆ ಮೂಲಕವೇ ಇಡ್ಲಿ ತಯಾರಿಸುತ್ತಿದ್ದ ಜ್ಜಿಗೆ ಸರ್ಕಾರವೇ ಖುದ್ದು LPG ಗ್ಯಾಸ್ ಕನೆಕ್ಷನ್ ನೀಡಿದೆ.

ಹೃದಯ ಶ್ರೀಮಂತಿಕೆಯುಳ್ಳ ಈ ಅಜ್ಜಿಯ ಕಥೆಯನ್ನು ಟ್ವೀಟ್ ಮೂಲಕ ಶೇರ್ ಮಾಡಿಕೊಂಡಿದ್ದ ಉದ್ಯಮಿ ಆನಂದ್ ಮಹೀಂದ್ರಾ, 'ಸಮಾಜದಲ್ಲಿ ಇಂತಹ ಒಳ್ಳೆಯ ವ್ಯಕ್ತಿಗಳಿರುತ್ತಾರೆ. ಕೇವಲ 1 ರೂಪಾಯಿಗೆ ಇಡ್ಲಿ ಮಾರುವ ಈ ಅಜ್ಜಿ, ಅದನ್ನು ಮಾಡಲು ಕಟ್ಟಿಗೆ ಒಲೆಯನ್ನೇ ಬಳಸುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. 

ಆಕೆ ಯಾರು ಎಂದು ಯರಿಗೂ ತಿಳಿದಿದ್ದರೆ, ಆಕೆ ಉದ್ಯಮಕ್ಕೆ ಸಹಾಯ ಮಾಡಲು ನಾನು ಸಹಾಯ ಮಾಡುತ್ತೇನೆ. ಆಕೆಗೊಂದು LPG ಗ್ಯಾಸ್ ಕೊಡಿಸಿ' ಎಂದಿದ್ದಾರೆ. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಬುಧವಾರದಂದು ಕೊಯಮುತ್ತೂರಿನ ಭಾರತ್ ಗ್ಯಾಸ್ ಪ್ರತಿಕ್ರಿಯಿಸಿದ್ದು, 'ಕಮಲಾಥಲ್ ಗೆ ನಾವು ಗ್ಯಾಸ್ ಕನೆಕ್ಷನ್ ನೀಡಿದ್ದೇವೆ' ಎಂದಿದ್ದಾರೆ. ಈ ಟ್ವೀಟ್ ಗಮನಿಸಿದ ನೆಟ್ಟಿಗರು ಭಾರತ್ ಗ್ಯಾಸ್ ನ ಈ ಉದಾರ ಮನಸ್ಸಿಗೆ ಭೇಷ್ ಎಂದಿದ್ದಾರೆ. 

ಆನಂದ್ ಮಹೀಂದ್ರಾ ಕೂಡಾ ಇದಕ್ಕೆ ಪ್ರತಿಯಾಗಿ ಮತ್ತೆ ಟ್ವೀಟ್ ಮಾಡಿದ್ದು 'ಅದ್ಭುತ, ಬಡ ಅಜ್ಜಿಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು. ನಾನು ಈ ಮೊದಲು ಹೇಳಿದಂತೆ ಮುಂದೆಯೂ ನಾನು ಆಕೆಗೆ ಸಹಾಯ ಮಾಡಲು ಸದಾ ಸಿದ್ಧನಾಗಿರುತ್ತೇನೆ' ಎಂದಿದ್ದಾರೆ.

ಇದಾದ ಬಳಿಕ ಹಿಂದೂಸ್ತಾನ್ ಪೆಟ್ರೋಲಿಯಂ ಕೂಡಾ ಆನಂದ್ ಮಹೀಂದ್ರಾರನ್ನು ಟ್ಯಾಗ್ ಮಾಡುತ್ತಾ 'ಕಮಲಾಥಲ್ HP ಗ್ಯಾಸ್ ಬಳಸುತ್ತಿದ್ದಾರೆ. ನಾವು ಅವರನ್ನು ಭೇಟಿಯಾಗಿ ಬರ್ನರ್ ನೀಡಿದ್ದೇವೆ. ಈಗ ಅವರು ಒಂದೇ ಬಾರಿ ಹೆಚ್ಚು ತಿಂಡಿ ತಯಾರಿಸಬಹುದು. ಈ ಮೂಲಕ ಅವರ ಉದ್ಯಮ ಮತ್ತಷ್ಟು ಹೆಚ್ಚಲಿದೆ' ಎಂದಿದ್ದಾರೆ. 

ಇನ್ನೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿ, ಆಯಿಲ್ ಮಾರ್ಕೆಟಿಂಗ್ ಕಂಪನಿ ಕಮಲಾಥಾಲ್ ಅವರಿಗೆ ಸಹಾಯ ಮಾಡಲಿದೆ,  ಇಂಥಹ ಮಹಿಳೆಯರ ಸಬಲೀಕರಣಕ್ಕಾಗಿ  ಮುಂದೆ ಬರಬೇಕು. ನಮ್ಮ ಪ್ರತಿನಿಧಿಗಳು ಆವರಿಗೆ ಇಂಡೇನ್ ಗ್ಯಾಸ್ ನೀಡಿ . ಸ್ಟವ್ ಮತ್ತು ಸಿಲಿಂಡರ್ ನೀಡಿದೆ, ಗುರುವಾರ ಕಮಲಾಥಾಲ್  ನಮ್ಮ ಬ್ರಾಂಡ್ ನ ಎಲ್ ಪಿಡಜಿ ಒಲೆಯಲ್ಲಿ ಅಡುಗೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ರೋಟರಿ ಕ್ಲಬ್ ಕಮಲಾಥಾಲ್ ಅವರಿಗೆ ಹೊಸ ಪಾತ್ರೆಗಳನ್ನು  ಕೊಡಿಸಿದೆ.  ಜಿಲ್ಲಾಧಿಕಾರಿ, ಕೆ ರಾಜಮಣಿ  ಇಡ್ಲಿ ಬೇಯಿಸಲು ಬೇಕಾದ ಬಟ್ಟೆ  ಹಾಗೂ ಸರ್ಕಾರದ ಯೋಜನೆಯಡಿ ವಸತಿ ನೀಡಿಲು ನಿರ್ಧರಿಸಿದ್ದಾರೆ.

ನಾನು ಈ ಮೊದಲು ಸೌದೆ ಓಲೆ ಬಳಸಿ ಅಡುಗೆ ಮಾಡುತ್ತಿದ್ದಾಗ ಸುಮಾರು 30 ನಿಮಿಷ ಸಮಯ ಬೇಕಾಗಿತ್ತು, ಈಗ 15 ನಿಮಿಷಕ್ಕೆ  ಇಡ್ಲಿ  ಬೇಯಿಸಿ ಕೊಡುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com