ಕೇಸರಿ ಬಟ್ಟೆಗಳನ್ನು ಧರಿಸಿದ ಜನರಿಂದ ದೇವಾಲಯದಲ್ಲಿ ಅತ್ಯಾಚಾರ: ದಿಗ್ವಿಜಯ್ ಸಿಂಗ್ ವಿವಾದ

"ಜನರು ಕೇಸರಿ ಬಟ್ಟೆಗಳನ್ನು ಧರಿಸಿ ಅತ್ಯಾಚಾರ ಮಾಡುತ್ತಿದ್ದಾರೆ, ದೇವಾಲಯಗಳ ಒಳಗೆ ಅತ್ಯಾಚಾರಗಳು ನಡೆಯುತ್ತಿವೆ" ಎಂದು ಕಾಂಗ್ರೆಸ್ ಮುಖಂಡ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
Updated on

ಭೋಪಾಲ್: "ಜನರು ಕೇಸರಿ ಬಟ್ಟೆಗಳನ್ನು ಧರಿಸಿ ಅತ್ಯಾಚಾರ ಮಾಡುತ್ತಿದ್ದಾರೆ, ದೇವಾಲಯಗಳ ಒಳಗೆ ಅತ್ಯಾಚಾರಗಳು ನಡೆಯುತ್ತಿವೆ" ಎಂದು ಕಾಂಗ್ರೆಸ್ ಮುಖಂಡ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಸಿಂಗ್ ಮಂಗಳವಾರ ಸ್ವಯಂ ಘೋಷಿತ ದೇವಮಾನವ ಕಂಪ್ಯೂಟರ್ ಬಾಬಾ ನೇತೃತ್ವದ ಹಿಂದೂ ದಾರ್ಶನಿಕರ ಸಮಾವೇಶ ಸಂತ ಸಮಾಗಮ್ ಉದ್ದೇಶಿಸಿ ಮಾತನಾಡಿ ಸಿಂಗ್ “ಜನರು ಕೇಸರಿ ಬಟ್ಟೆಗಳನ್ನು ಧರಿಸಿ ಅತ್ಯಾಚಾರ ಮಾಡುತ್ತಿದ್ದಾರೆ, ದೇವಾಲಯಗಳ ಒಳಗೆ ಅತ್ಯಾಚಾರಗಳು ನಡೆಯುತ್ತಿವೆ, ಇದು ನಮ್ಮ ಧರ್ಮವೇ?” ಎಂದು ಪ್ರಶ್ನಿಸಿದ್ದಾರೆ. 

"ಕೇಸರಿ ಬಟ್ಟೆ ಧರಿಸಿದ ಜನರು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆ, ಜನರು ಕೇಸರಿ ಬಟ್ಟೆಗಳನ್ನು ಧರಿಸಿ ಅತ್ಯಾಚಾರ ಮಾಡುತ್ತಿದ್ದಾರೆ.. ದೇವಾಲಯಗಳ ಒಳಗೆ ಅತ್ಯಾಚಾರಗಳು ನಡೆಯುತ್ತಿವೆ, ಇದು ನಮ್ಮ ಧರ್ಮವೇ? ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ" ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಸಮ್ಮುಖದಲ್ಲೇ ಸಿಂಗ್ ಹೇಳಿಕೆ ನೀಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಸಿಂಗ್  "ದೇಶದಲ್ಲಿ ಮಠಗಳು ಮತ್ತು ದೇವಾಲಯಗಳನ್ನುರಾಜಕೀಯ ಕೇಂದ್ರಗಳಾಗಿ ಪರಿವರ್ತಿಸಲು ಪ್ರಯತ್ನಗಳು ನಡೆಯುತ್ತಿವೆ, ನಾವು ಅದರ ವಿರುದ್ಧ ಹೋರಾಡಬೇಕಾಗಿದೆ. ಸನಾತನ ಧರ್ಮವನ್ನು ಪಾಲಿಸುವವರು ಅದನ್ನು  ರಾಜಕೀಯವಾಗಿ ಬಳಸದಂತೆ ನಾನು ಮನವಿ ಮಾಡುತ್ತೇನೆ ” ಎಂದರು.

ಬಿಜೆಪಿಗೆ ಟಾಂಗ್ ನೀಡಿದ ಸಿಂಗ್  “ಅಧಿಕಾರ ಹಿಡಿಯಲು ಬಿಜೆಪಿ ಧರ್ಮವನ್ನು ಬಳಸುತ್ತದೆ. ಜೈ ಶ್ರೀ ರಾಮ್ ಘೋಷಣೆ ರಾಜಕೀಯವಾಗಿ ಮಾರ್ಪಟ್ಟಿದೆ.ಹಾಗಾಗಿ ಇದೀಗ ಜೈ ಸಿಯಾ ರಾಮ್ ಎಂದು ಘೋಷಣೆ ಮಾಡಬೇಕಾದ ಅಗತ್ಯ ಬಂದಿದೆ.ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿನ ಸಂಸ್ಕೃತ ಶಾಲೆಗಳ ರಕ್ಷಣೆಗೆ ಬದ್ದವಾಗಿದೆ.ಧಾರ್ಮಿಕ ವಿಚಾರವನ್ನು ಪ್ರಾಥಮಿಕ ತರಗತಿಗಳ ಪಠ್ಯಕ್ರಮದಲ್ಲಿ ಸೇರಿಸಲು ನಾನು ಸಿಎಂ ಮತ್ತು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇಷ್ಟಕ್ಕೂ ಸಿಂಗ್ ಇಂತಹಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇನೂ ಹೊಸದಲ್ಲ ಈ ಹಿಂದೆ ಹಲವಾರು ಬಾರಿ ತಾವು ಹೇಳಿಕೆ ನಿಡಿಯೇ ಸುದ್ದಿಯಾಗಿದ್ದರು.ಕೆಲ ವಾರಗಳ ಹಿಂದಷ್ಟೇ ಪಾಕಿಸ್ತಾನದ ಐಎಸ್‌ಐನ ಸೂಚನೆಯಂತೆ ಭಾರತದ ಮುಸ್ಲಿಮೇತರರು, ದೇಶದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾರೆಂದು ಹೇಳಿದ್ದರು. ಅಲ್ಲದೆ ಐಎಸ್‍ಐನಿಂದ ಬಿಜೆಪಿ ಹಾಗೂ ಬಜರಂಗ ದಳ ಹಣ ಪಡೆಯುತ್ತಿವೆ.ಎಂದೂ ಆರೋಪಿಸಿದ್ದರು.

ಇನ್ನು ಸಿಂಗ್ ದೇವಾಲಯದಲ್ಲಿನ ಅತ್ಯಾಚಾರ ಹೇಳಿಕೆಗೆ ಮಧ್ಯಪ್ರದೇಶ ಬಿಜೆಪಿ ವಕ್ತಾರ ರಜನೀಶ್ ಅಗ್ರವಾಲ್ "ಹಿಂದೂ ದಾರ್ಶನಿಕರ ಸಮಾವೇಶವನ್ನು ರ್ಮವನ್ನು ಕೆಣಕಲು ಆಯೋಜಿಸಲಾಗಿದೆಯೇ ಎನ್ನುವುದನ್ನು ಸಿಎಂ ಕಮಲ್ ನಾಥ್ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com