ಸೇನಾಪಡೆಗೆ ಮತ್ತಷ್ಟು ಬಲ! ಏರ್-ಟು-ಏರ್ ಕ್ಷಿಪಣಿ ಅಸ್ತ್ರ ಪರೀಕ್ಷೆ ಯಶಸ್ವಿ

ಭಾರತೀಯ ಸೇನಾ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು ಸಾಧಿಸಿದೆ. ಮಂಗಳವಾರ ಒಡಿಶಾ ಕರಾವಳಿಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಏರ್ ಟು ಏರ್ ಕ್ಷಿಪಣಿ ಅಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಏರ್-ಟು-ಏರ್ ಕ್ಷಿಪಣಿ ಅಸ್ತ್ರ ಪರೀಕ್ಷೆ ಯಶಸ್ವಿ
ಏರ್-ಟು-ಏರ್ ಕ್ಷಿಪಣಿ ಅಸ್ತ್ರ ಪರೀಕ್ಷೆ ಯಶಸ್ವಿ

ಬಾಲಸೂರ್: ಭಾರತೀಯ ಸೇನಾ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು ಸಾಧಿಸಿದೆ. ಮಂಗಳವಾರ ಒಡಿಶಾ ಕರಾವಳಿಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಏರ್ ಟು ಏರ್ ಕ್ಷಿಪಣಿ ಅಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಅತ್ಯಾಧುನಿಕ ಕ್ಷಿಪಣಿಯನ್ನು ಸುಖೋಯ್ -30 ಎಂಕೆಐ ಬಳಸಿ ಪರೀಕ್ಷಿಸಲಾಗಿದ್ದು ಭಾರತೀಯ ವಾಯುಪಡೆಯು ತರಬೇತಿ ಭಾಗವಾಗಿ ಈ ಪರೀಕ್ಷೆ ನಡೆದಿತ್ತು ಎಂದು  ಅಧಿಕೃತ ಹೇಳಿಕೆ ತಿಳಿಸಿದೆ.

"ಲೈವ್ ವೈಮಾನಿಕ ಗುರಿಯನ್ನು ಇದೇ ಮೊದಲ ಬಾರಿಗೆ ಸ್ಥಳೀಯ ಮಾದರಿ ಬಳಸಿ ತಯಾರಾದ ಏರ್ ಟು ಏರ್ ಕ್ಷಿಪಣಿಯ ಗುರಿ ಮುಟ್ಟಿದೆ." ಎಂದು ಹೇಳಿಕೆ ತಿಳಿಸಿದೆ.

ಇದು, ವಿವಿಧ ರಾಡಾರ್‌ಗಳು, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಮತ್ತು ಸಂವೇದಕಗಳು ಕ್ಷಿಪಣಿಯನ್ನು ಪತ್ತೆಹಚ್ಚಿದ್ದವು. ಮತ್ತು ಗುರಿಯನ್ನು ನಿಶ್ಚಿತವಾಗಿ ಹೊಡೆದುರುಳಿಸಿದೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಕುರಿತು  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಮತ್ತು ವಾಯುಪಡೆಯ ತಂಡಗಳನ್ನು ಅಭಿನಂದಿಸಿದ್ದಾರೆ  ಡಿಆರ್‌ಡಿಒ ವಿನ್ಯಾಸಗೊಳಿಸಿದ, ಕಣ್ಣಿನ ದೃಷ್ಟಿಗೂ ಮೀರಿದ ಗುರಿಯನ್ನು ಅಸ್ತ್ರ ಪಣಿ ವಿವಿಧ ಶ್ರೇಣಿಗಳು ಪತ್ತೆ ಮಾಡಿ ಹೊಡೆದುರುಳಿಸಲು ಸಮರ್ಥವಾಗಿದೆ  ಎಂದು ರಕ್ಷಣಾ ಮೂಲಗಳು ತಿಳಿಸಿವೆ. 70 ಕಿ.ಮೀ.ಗಿಂತ ಹೆಚ್ಚಿನ ಸ್ಟ್ರೈಕ್ ಶ್ರೇಣಿಯನ್ನು ಹೊಂದಿರುವ ಅತ್ಯಾಧುನಿಕ ಕ್ಷಿಪಣಿ ಗಂಟೆಗೆ 5,555 ಕಿ.ಮೀ ವೇಗದಲ್ಲಿ ಗುರಿಯತ್ತ ಹಾರಬಲ್ಲದು ಎಂದು ಪ್ರಕಟಣೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com